Connect with us

Dvgsuddi Kannada | online news portal | Kannada news online

ಮಧ್ಯಪ್ರದೇಶದಲ್ಲಿ ಕಾಲುವೆಗೆ ಉರುಳಿದ ಬಸ್; 32 ಸಾವು

ರಾಷ್ಟ್ರ ಸುದ್ದಿ

ಮಧ್ಯಪ್ರದೇಶದಲ್ಲಿ ಕಾಲುವೆಗೆ ಉರುಳಿದ ಬಸ್; 32 ಸಾವು

ಭೋಪಾಲ್ :  ಮಧ್ಯಪ್ರದೇಶ  ರಾಜ್ಯ ಸಿಧಿ ಜಿಲ್ಲೆಯಲ್ಲಿ ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿದ ಪರಿಣಾಮ 32 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಮುಳುಗಿದ ಶಂಕೆ ಇದೆ.

ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 54 ಜನ ಪ್ರಯಾಣ ಬೆಳೆಸಿದ್ದರು. ಅದರಲ್ಲಿ 07 ಮಂದಿ ದಡ ಸೇರಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಬೇಕಾದ ಪ್ರಮುಖ ಕಾರ್ಯಕ್ರಮವೊಂದನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.  ರಕ್ಷಣಾ ಕಾರ್ಯ ಈಗಾಗಲೇ ನಡೆಯುತ್ತಿದೆ. ಇಬ್ಬರು ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಇಡೀ ರಾಜ್ಯ  ಸಂತ್ರಸ್ತರೊದಿಗೆ ನಿಂತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top