Connect with us

Dvgsuddi Kannada | online news portal | Kannada news online

ಭೀಕರ ಅಪಘಾತ; ಅಯೋಧ್ಯೆ ಯಾತ್ರೆಗೆ ತೆರಳಿದ್ದ ಬೀದರ್ ನ 7 ಮಂದಿ ಸಾವು

ಪ್ರಮುಖ ಸುದ್ದಿ

ಭೀಕರ ಅಪಘಾತ; ಅಯೋಧ್ಯೆ ಯಾತ್ರೆಗೆ ತೆರಳಿದ್ದ ಬೀದರ್ ನ 7 ಮಂದಿ ಸಾವು

ಬೀದರ್: ಅಯೋಧ್ಯೆ ಯಾತ್ರೆಗೆ ತೆರಳಿದ್ದ ಬೀದರ್​ನ 7 ಮಂದಿ ಇಂದು (ಮೇ 29)‌ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಹೆದ್ದಾರಿಯಲ್ಲಿ ದುರಂತ ಸಭವಿಸಿದೆ.ಮೃತರು ಬೀದರ್ ನ ಗುಂಪಾ ಕಾಲೋನಿಯ ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ಶಿವಕುಮಾರ್(28), ಜಗದಾಂಬಾ(52), ಮನ್ಮಥ(36), ಅನಿಲ್(30) ಸಂತೋಷ(29), ಶಶಿಕಲಾ(38), ಸರಸ್ವತಿ(42) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಬೀದರ್​ನ ಪ್ರವಾಸಿಗರು ತೆರಳುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಟಿಟಿ ವಾಹನದಲ್ಲಿದ್ದ 7 ಜನರು ಮೃತಪಟ್ಟಿದ್ದರೆ, 9 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡಿರುವ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top