ದಾವಣಗೆರೆ: ನ.22ರ ರಾತ್ರಿಯಿಂದ ಭದ್ರಾ ನಾಲೆಯ ನೀರು ಬಂದ್ ಮಾಡಲಾಗುವುದು ಎಂದು ಭದ್ರಾ ಜಲಾಶಯದ ಅಚ್ಚುಕಟ್ಟು ರೈತರಿಗೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಲ್ಲಿ ನೀರನ್ನು ದಿನಾಂಕ:06.09.2023 ರಂದು ನಡೆದ 83ನೇ
ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಹರಿಸಲಾಗುತ್ತಿದೆ. ದಿ:15.09.2023 ಆದೇಶದಂತೆ ನೀರನ್ನು ದಿ:17.11.2023 ರಂದು ನಿಲ್ಲಿಸಬೇಕಾಗಿತ್ತು. ಆದರೆ, ನೀರು ನಿಲ್ಲಿಸುವ ದಿನಾಂಕವನ್ನು ದಿ:22.11.2023ಕ್ಕೆ ಮುಂದೂಡಲಾಗಿರುತ್ತದೆ.
ಭದ್ರಾ ಕಾಡಾ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ದೇಶನದಂತೆ, 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಮುಂಗಾರು ಬೆಳೆಗಳಿಗೆ ಹರಿಸಲಾಗುತ್ತಿರುವ ನೀರನ್ನು ದಿ:22.11.2023 ರ ರಾತ್ರಿಯಿಂದ ಸ್ಥಗಿತಗೊಳಿಸಲಾಗುವುದು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತ ಬಾಂಧವರು ಮತ್ತು ಸಂಬಂಧಪಟ್ಟವರು ಸಹಕರಿಸಲು ಕೋರಲಾಗಿದೆ.



