ದಾವಣಗೆರೆ: ಜಿಲ್ಲೆಯ ರೈತರ ಮತ್ತು ಜನರ ಕುಡಿಯುವ ನೀರಿನ ಮೂಲವಾದ ಭದ್ರಾ ಜಲಾಶಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ತೀವ್ರ ಬರದಿಂದ 68 ವರ್ಷದಲ್ಲಿಯೇ ಕಡಿಮೆ ನೀರು ಸಂಗ್ರಹವಾಗಿದ್ದ ಭದ್ರಾ ಜಲಾಯಶಕ್ಕೆ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭದಿಂದ ಒಳ ಹರಿವು ಹೆಚ್ಚಿದೆ.
ಭದ್ರಾವತಿಯ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಇಂದಿನ ನೀರಿನ ಮಟ್ಟ 17.11 ಅಡಿಯಷ್ಟಿದೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಆದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇಂದು ಜಲಾಶಯಕ್ಕೆ 2911 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹೊರ ಹರಿವು 341 ಕ್ಯೂಸೆಕ್ ಇದೆ. ಭದ್ರಾ ಡ್ಯಾಂ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ನೀರು ಒದಗಿಸುತ್ತಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 117.11 ಅಡಿ
- ಒಳ ಹರಿವು : 2911 ಕ್ಯೂಸೆಕ್
- ಹೊರ ಹರಿವು : 341 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 137.4 ಅಡಿ



