ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ಬಿಭಜಿಸಿ ವಿಜಯನಗರ ಜಿಲ್ಲೆ ಘೋಷಣೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಒತ್ತಾಯಿಸಿ ಇಂದು ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳ್ಳಾರಿಯ ಸುಮಾರು 62 ಕ್ಕೂ ಹೆಚ್ಚು ಸಂಘಟನೆಗಳು ಇಂದು ಬಂದ್ಗೆ ಕರೆ ನೀಡಿದ್ದವು. ಆದರೆ ಸಂಘಟನೆಯ ಕೊರತೆಯಿಂದಾಗಿ ಬಳ್ಳಾರಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿಲ್ಲ. ಬಳ್ಳಾರಿ ನಗರದ ರಾಯಲ್ ಸರ್ಕಲ್ ಹೊರತುಪಡಿಸಿ ಉಳಿದಂತೆ ಜನ ಜೀವನ ಎಂದಿನಂತೆ ಇತ್ತು. ಯಾವುದೇ ರಸ್ತೆಗಳು ಬಂದ್ ಆಗಿರಲಿಲ್ಲ.
ಬಂದ್ ಕೇವಲ ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ. ಆಯಾ ಸಂಘಟನೆಯ ನಾಯಕರಿಗೆ ಮಾತ್ರ ಬಂದ್ ಸೀಮಿತವಾಗಿದೆ. ಈ ಹಿಂದೆ ಜಿಲ್ಲೆ ವಿಭಜನೆಗ ವಿರೋಧ ಮಾಡಿದ್ದರು. ಆದರೆ ಈಗ ಕರೆ ನೀಡಿದ ಬಂದ್ಗೆ ಜಿಲ್ಲೆಯ ರಾಜಕೀಯ ಮುಖಂಡರು ದೂರು ಉಳಿದಿದ್ದಾರೆ.ಸಂಘಟನೆಯ ಕೊರತೆಯಿಂದಾಗಿ ಇಂದಿನ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ.
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಸಿಎಂ ಬಿ.ಎಸ್ ಯಡಿಯೂರಪ್ಪ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.



