Connect with us

Dvgsuddi Kannada | online news portal | Kannada news online

ತರಳಬಾಳು ಕೇಂದ್ರದಲ್ಲಿ ಬಸವ ಜಯಂತಿ; ವಚನ ಸಂಪುಟ ಜಾಲತಾಣ, ಬಸವಣ್ಣನವರ ವಚನಗಳ ಹಿಂದಿ – ತೆಲುಗು ಅನುವಾದ ಕೃತಿಗಳ ಲೋಕಾರ್ಪಣೆ

ಪ್ರಮುಖ ಸುದ್ದಿ

ತರಳಬಾಳು ಕೇಂದ್ರದಲ್ಲಿ ಬಸವ ಜಯಂತಿ; ವಚನ ಸಂಪುಟ ಜಾಲತಾಣ, ಬಸವಣ್ಣನವರ ವಚನಗಳ ಹಿಂದಿ – ತೆಲುಗು ಅನುವಾದ ಕೃತಿಗಳ ಲೋಕಾರ್ಪಣೆ

ದಾವಣಗೆರೆ: ಬೆಂಗಳೂರು ತರಳಬಾಳು ಕೇಂದ್ರದಲ್ಲಿ ಬಸವ ಜಯಂತಿ ,  ; ಶಿವಶರಣರ ವ ಪರಿಷ್ಕೃತ ವಚನ ಗಣಕ ಸಂಪುಟ ಮತ್ತು ಬಸವಣ್ಣ ಅವರ ವಚನಗಳ ತೆಲುಗು ಮತ್ತು ಹಿಂದಿ ಭಾಷೆಗಳ  ಅನುವಾದದ ಕೃತಿಗಳ ಲೋಕಾರ್ಪಣೆಯ ಕಾರ್ಯಕ್ರಮ  ನಾಳೆ (ಮೇ 3)  ಸಂಜೆ 6-30ಕ್ಕೆ ನಡೆಯಲಿದೆ. ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಏಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ,  ಆಂಧ್ರಪ್ರದೇಶ ಸರ್ಕಾರದ ಸಚಿವೆ ಉಷಾ  ಶ್ರೀಚರಣ್, ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್,  ನ್ಯಾಯವಾದಿ ಅಶೋಕ ಹಾರನಹಳ್ಳಿ,  ಶಾಸಕ ಬಿ.ಎಸ್. ಸುರೇಶ್, ವೈ. ಎ. ನಾರಾಯಣಸ್ವಾಮಿ ಭಾಗವಹಿಸುತ್ತಿದ್ದಾರೆ.

ಅತಿಥಿಗಳಾಗಿ ಸಾಹಿತಿ ಡಾ. ಹಂಪನಾ ಮತ್ತು ವೀರಣ್ಣ ರಾಜೂರ, ಆಂಧ್ರದ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ, ಕರ್ನಾಟಕ ರೇಷ್ಮೆ ಮಂಡಳಿ  ಆಯುಕ್ತೆ ವಿ. ವಿ. ಜೋತ್ಸ್ನಾ, ವಿಪ್ರೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಪಾಲ್ಗೊಳ್ಳುತ್ತಿದ್ದಾರೆ.  ಈ ಸಂದರ್ಭದಲ್ಲಿ ಕೊಟ್ಟೂರಿನ ಹಿಂದಿ ಭಾಷಾ ಸಾಹಿತ್ಯ ವಿದ್ವಾನ್ ಬಣಕಾರ್ ಕೆ ಗೌಡಪ್ಪ,  ಹಿಂದಿ  ಭಾಷೆಗೆ ಅನುವಾದಿಸಿದ ಬಸವಣ್ಣನವರ `ಷಟ್‍ಸ್ಥಲ ವಚನಗಳು’ಕೃತಿ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ತೆಲುಗು ಭಾಷಾ ಪ್ರಾಧ್ಯಾಪಕ ಬಾಡಾಲು ರಾಮಯ್ಯನವರು ತೆಲುಗು ಭಾಷೆಗೆ ಅನುವಾದಿಸಿದ `ಬಸವೇಶ್ವರ ವಚನಾಲು’ಕೃತಿ ಮತ್ತು ಮೈಸೂರಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಚಂದ್ರಶೇಖರಯ್ಯ ನವರು ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಜೀವನವನ್ನಾಧರಿಸಿ ರಚಿಸಿರುವ `ಧೀರ ಸನ್ಯಾಸಿ’ ಕಾದಂಬರಿಯು ಲೋಕಾ ರ್ಪಣೆಗೊಳ್ಳಲಿವೆ.

ಇದೇ ವೇದಿಕೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾ ಚಾರ್ಯ ಮಹಾಸ್ವಾಮಿಗಳು ಅಭಿವೃದ್ಧಿಪಡಿಸಿರುವ  ತಂತ್ರಾಶ `ಶಿವಶರಣರ ವಚನ ಸಂಪುಟ’ ಅಂತರ್ಜಾಲ ತಾಣವು ಅನಾವರಣಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಭರತನಾಟ್ಯ ಕಲಾವಿದೆ ಚಿತ್ರಾ ಚಂದ್ರ ಶೇಖರ್ ಮತ್ತು ಕು. ಪೃಥ್ವಿ ಬೇಲೂರು ಇವರಿಂದ ಭರತನಾಟ್ಯ ಮತ್ತು ವಚನ ನೃತ್ಯ ಪ್ರದರ್ಶನವಿರುತ್ತದೆ.

ಶಿವಶರಣರ ವಚನ ಸಂಪುಟದ ಜಾಲತಾಣದಲ್ಲಿ ಏನೇನಿದೆ ?: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಸಮಗ್ರ ವಚನ ಸಂಪುಟಗಳನ್ನು ಆಧರಿಸಿ, 1994ರಲ್ಲಿ ಮೊಟ್ಟಮೊದಲ ಸಲ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. `ವಚನ ಗಣಕ ಸಂಪುಟದ ತಂತ್ರಾಂಶವನ್ನು ರೂಪಿಸಿದ್ದರು.

ಅಂದಿನ ತಂತ್ರಜ್ಞಾನವನ್ನು ಅವಲಂಬಿಸಿ ರೂಪಿಸಿದ ಈ ತಂತ್ರಾಂಶದಲ್ಲಿ ವಚನದ ಯಾವುದಾದರು ಪದವನ್ನು ಟೈಪಿಸಿದರೆ ಸಾಕು, ಆ ಪದ ಬಳಕೆಯಾಗಿರುವ ಎಲ್ಲಾ ವಚನಗಳನ್ನು  ಪರದೆಯ ಮೇಲೆ ತೋರಿಸುತ್ತಿತ್ತು. ವಚನ ಸಾಹಿತ್ಯವನ್ನು ಆಧರಿಸಿದ ಶಬ್ದಕೋಶ ಲಭ್ಯವಿತ್ತು. ವೆಬ್ ಸೈಟಿನಲ್ಲಿ ನೋಂದಾಯಿಸಲ್ಪಟ್ಟವರು ಮಾತ್ರ ಬಳಸಬೇಕಾಗಿತ್ತು. ಈ ನಡುವಿನ ಎರಡೂವರೆ ದಶಕಗಳ ಅಂತರದಲ್ಲಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಮೊಬೈಲ್ ಫೋನ್ ಮಾಡಿರುವ ಕ್ರಾಂತಿಯಿಂದ ಜಗತ್ತೇ ಬೆರಳ ತುದಿಯಲ್ಲಿದೆ. ಅಲ್ಲದೇ ಸಮಗ್ರ ವಚನ ಸಂಪುಟಗಳೂ ಸಹ ಈಗಾಗಲೇ ನಾಲ್ಕನೆಯ ಮುದ್ರಣಗಳನ್ನು ಕಂಡು ಸಾಕಷ್ಟು ಪರಿಷ್ಕರಣೆಗೊಂಡಿವೆ. ಹಾಗಾಗಿ ಈ ಎಲ್ಲಾ ಕಾರಣಗಳಿಂದ ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ತಂತ್ರಾಂಶ ಈಗ ರೂಪಿಸಲಾಗಿದೆ.

ಈಗ ಸಿದ್ಧವಾಗಿರುವ ತಂತ್ರಾಂಶದಲ್ಲಿ 200ಕ್ಕೂಹೆಚ್ಚು ವಚನಕಾರರ 21000ಕ್ಕೂ ಹೆಚ್ಚು ವಚನಗಳಿವೆ. ಕನ್ನಡ ಮತ್ತುಇಂಗ್ಲಿಷ್ ಲಿಪಿಯಲ್ಲಿ ಮೂಲ ಪಠ್ಯ ಲಭ್ಯವಿದ್ದು, ಆ ವಚನ ಇತರೆ ಭಾಷೆಗಳಿಗೆ ಅನುವಾದಗೊಂಡಿದ್ದರೆ ಅದೇ ಲಿಪಿಯಲ್ಲಿ ಕಾಣಬಹುದು. ಉದಾಹರಣೆಗೆ, ಬಸವಣ್ಣನವರ ವಚನಗಳು ಈಗಾಗಲೇ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಈಗಿನ ತಂತ್ರಾಂಶದಲ್ಲಿ ಇಂಗ್ಲಿಷ್, ಹಿಂದಿ, ತೆಲುಗು, ತಮಿಳುಭಾಷಿಗರು ಸಹ ಬಸವಣ್ಣನವರ ವಚನಗಳನ್ನು ತಮ್ಮ ತಮ್ಮ ಭಾಷೆಗಳಲ್ಲಿ ಓದಬಹುದಾಗಿದೆ. ಅಲ್ಲದೆ ಆ ವಚನದ ಧ್ವನಿ(ಆಡಿಯೋ)ಯನ್ನು ಹಾಗೂ ಆ ವಚನ ರಾಗ ಸಂಯೋಜನೆಗೊಂಡು ಹಾಡಲ್ಪಟ್ಟಿದ್ದರೆ, ಅದನ್ನು ಸಹ ಆಲಿಸಬಹುದು. ಈ ನೂತನ ತಂತ್ರಾಂಶದಿಂದ ಮೊಬೈಲ್ ಸೆಟ್ಟಿನಲ್ಲೂ ನಮಗೆ ಬೇಕಾದ ವಚನವನ್ನು ಹುಡುಕಬಹುದು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top