Connect with us

Dvgsuddi Kannada | online news portal | Kannada news online

ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?

ಜ್ಯೋತಿಷ್ಯ

ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?

ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳು. ಪ್ರತಿ ರಾಶಿಗೆ ಅದರದ್ದೇ ಆದ ಗುಣ, ಸ್ವಭಾವಗಳು ಮತ್ತು ಅಧಿಪತಿಗಳು. ವ್ಯಕ್ತಿಯ ರಾಶಿಯ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ಹೇಳಬಹುದಾಗಿದೆ.

ಅಗ್ನಿ,ಪೃಥ್ವಿ, ವಾಯು ಮತ್ತು ಜಲ ತತ್ತ್ವರಾಶಿಗಳೆಂದು ವಿಂಗಡಿಸಲಾಗಿದೆ. ಪ್ರತಿ ರಾಶಿಯು ಒಂದೊಂದು ತತ್ತ್ವದಡಿಯಲ್ಲಿ ಬರುತ್ತದೆ. ಈ ತತ್ತ್ವಗಳು ಸಹ ರಾಶಿಯ ಗುಣ, ಸ್ವಭಾವಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಪ್ರತಿ ರಾಶಿಗೂ ಅಧಿಪತಿಯಾಗಿ ಒಂದೊಂದು ಗ್ರಹಗಳಿರುತ್ತವೆ. ಆ ಗ್ರಹಗಳು ಸಹ ರಾಶಿಯ ಗುಣವನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತವೆ. ಹಾಗಾದರೆ ಪ್ರತ್ಯೇಕ ರಾಶಿಗಳ ವಿಶೇಷ ಸ್ವಭಾವವೇನೆಂದು ತಿಳಿಯೋಣ…

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ
ಮೇಷ ರಾಶಿಯವರು ಸ್ವತಂತ್ರರಾಗಿರಲು ಬಯಸುತ್ತಾರೆ. ಯಾವುದೇ ನಿರ್ಧಾರವನ್ನು ಸ್ವತಃ ತೆಗೆದುಕೊಳ್ಳುಲು ಹಿಂಜರಿಯುವುದಿಲ್ಲ. ಇವರು ಪರಿಶ್ರಮಿಗಳು ಮತ್ತು ಶಕ್ತಿವಂತರು. ತಮ್ಮ ಅಭಿಪ್ರಾಯವನ್ನು ಇತರರ ಮುಂದಿಡಲು ಹೆದರುವುದಿಲ್ಲ. ಮೇಷ ರಾಶಿಯವರಿಗೆ ಸಿಟ್ಟು ಬೇಗ ಬರುತ್ತದೆ ಎಂಬುದನ್ನು ಬಿಟ್ಟರೆ, ಅತ್ಯುತ್ತಮವಾದ ಗುಣಗಳನ್ನು ಇವರು ಹೊಂದಿರುತ್ತಾರೆ.

ವೃಷಭ ರಾಶಿ
ಈ ರಾಶಿಯವರದು ಶಾಂತ ಸ್ವಭಾವ. ಇವರಿಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವು ಚೆನ್ನಾಗಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಹಣ ಮತ್ತು ಪ್ರಸಿದ್ಧಿಯ ಮೇಲೆ ಅತ್ಯಂತ ಮೋಹವನ್ನು ಹೊಂದಿರುತ್ತಾರೆ.

ಮಿಥುನ ರಾಶಿ
ಈ ರಾಶಿಯವರು ಉತ್ತಮ ಮಾತುಗಾರರಾಗಿರುತ್ತಾರೆ. ಈ ರಾಶಿಯವರು ಹಲವಾರು ಭಾಷೆಗಳ ಜ್ಞಾನವನ್ನು ಹೊಂದಿರುತ್ತಾರೆ. ಇವರ ಸ್ವಭಾವ ಆಗಾಗ ಬದಲಾಗುವ ಕಾರಣ ಇವರನ್ನು ಅರಿತುಕೊಳ್ಳುವುದು ಕಷ್ಟಕರ.

ಕರ್ಕಾಟಕ ರಾಶಿ
ಈ ರಾಶಿಯವರು ಪರಿಶುದ್ಧ ಹೃದಯವನ್ನು ಮತ್ತು ಸ್ವಚ್ಛ ಮನಸ್ಸನ್ನು ಹೊಂದಿರುತ್ತಾರೆ. ತನ್ನವರನ್ನು ಹೆಚ್ಚು ಪ್ರೀತಿಸುತ್ತಾರೆ. ರಾಜಕೀಯ ವಿಷಯಗಳಲ್ಲಿ ಹೆಚ್ಚು ಪ್ರಾವೀಣ್ಯತೆ ಹೊಂದಿರುತ್ತಾರೆ.

ಸಿಂಹ ರಾಶಿ
ಈ ರಾಶಿಯು ಸೂರ್ಯನ ಪ್ರಭಾವಕ್ಕೊಳಪಡುತ್ತದೆ. ಬಾಲ್ಯದಿಂದಲೂ ಇವರಿಗೆ ನಾಯಕತ್ವದ ಗುಣವಿರುತ್ತದೆ. ಸಾಹಸಿಗಳು ಮತ್ತು ಶಕ್ತಿವಂತರು ಸಿಂಹ ರಾಶಿಯವರು. ರಾಜನಂತೆ ಜೀವನವನ್ನು ನಡೆಸುತ್ತಾರೆ. ಅಹಂಕಾರ ಮತ್ತು ಸಿಟ್ಟು ಇವರ ಅವಗುಣಗಳಾಗಿವೆ.

ಕನ್ಯಾ ರಾಶಿ
ಈ ರಾಶಿಯವರು ಜ್ಞಾನಿಗಳು ಮತ್ತು ವಿನಯವಂತರು ಆಗಿರುತ್ತಾರೆ. ಕೆಲವು ಬಾರಿ ವ್ಯಂಗ್ಯ ಮತ್ತು ವಿಷಯವನ್ನು ದೊಡ್ಡದು ಮಾಡುವ ಗುಣ ಸಹ ಇವರಲ್ಲಿರುತ್ತದೆ. ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವವರೆಗೂ ಪಟ್ಟು ಬಿಡುವುದಿಲ್ಲ, ಇದು ಈ ರಾಶಿಯವರ ವಿಶೇಷ ಗುಣವೆಂದು ಹೇಳಬಹುದಾಗಿದೆ.

ತುಲಾ ರಾಶಿ
ಈ ರಾಶಿಯವರು ಆಕರ್ಷಕವಾಗಿರುತ್ತಾರೆ. ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳಲು ಇವರು ಇಷ್ಟಪಡುವುದಿಲ್ಲ. ಈ ರಾಶಿಯವರಿಗೆ ದುಬಾರಿ ಮತ್ತು ಬ್ರಾಂಡೆಡ್ ವಸ್ತುಗಳು ಇಷ್ಟವಾಗುತ್ತವೆ. ವಾದ-ವಿವಾದಗಳಲ್ಲಿ ಇತರರನ್ನು ಗೊಂದಲಕ್ಕೆ ಗುರಿ ಮಾಡಿ ಬಿಡುತ್ತಾರೆ.

ವೃಶ್ಚಿಕ ರಾಶಿ
ಈ ರಾಶಿಯವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಈ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿರುತ್ತದೆ. ಇವರಲ್ಲಿ ಉತ್ಸಾಹ ಮತ್ತು ಸಾಹಸಿ ಗುಣವನ್ನು ನೋಡಬಹುದಾಗಿದೆ.

ಧನು ರಾಶಿ
ಈ ರಾಶಿಯವರು ಬೃಹಸ್ಪತಿಯಂತೆ ಜ್ಞಾನಿಗಳಾಗಿರುತ್ತಾರೆ. ಇವರು ಪ್ರಾಮಾಣಿಕರು, ಸತ್ಯವಂತರು, ಕರ್ತವ್ಯನಿಷ್ಠರು ಮತ್ತು ವಿಶ್ವಾಸಕ್ಕೆ ಅರ್ಹ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಸಿಟ್ಟು ಮತ್ತು ಹಿಂಸಾ ಗುಣ ಸಹ ಇವರಲ್ಲಿರುತ್ತದೆ.

ಮಕರ ರಾಶಿ
ಈ ರಾಶಿಯವರು ಆಳವಾದ ಚಿಂತನೆಯನ್ನು ಮಾಡುವ ಸ್ವಭಾವದವರಾಗಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರಿತು ನಿಭಾಯಿಸುತ್ತಾರೆ. ಕೈಗೆ ಬಂದ ಕೆಲಸವನ್ನು ಪೂರ್ತಿ ಮಾಡುವವರೆಗೂ ಸಮಾಧಾನದಿಂದ ಕೂರುವವರು ಈ ರಾಶಿಯವರಲ್ಲ. ಬೇರೆಯವರನ್ನು ಅನುಮಾನದಿಂದ ನೋಡುವ ಗುಣ ಇವರಿಗಿರುತ್ತದೆ.

ಕುಂಭ ರಾಶಿ
ಈ ರಾಶಿಯವರು ನಿಧಾನಿಗಳು ಮತ್ತು ದಯಾವಂತರು. ಇವರ ಬುದ್ಧಿವಂತಿಕೆ, ಚಾತುರ್ಯ್ಯ ಮತ್ತು ತರ್ಕ ಮಾಡುವ ಕ್ಷಮತೆ ಇತರರು ಮೆಚ್ಚುವಂತಿರುತ್ತದೆ. ಮಾತಿನ ಚಾತುರ್ಯ್ಯದಿಂದ ಎಂಥವರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ.

ಮೀನ ರಾಶಿ
ಈ ರಾಶಿಯವರು ಬಹುಮುಖ ಪ್ರತಿಭೆಯುಳ್ಳವರಾಗಿರುತ್ತಾರೆ.
ತಮ್ಮ ಮಾತನ್ನು ಉಳಿಸಿಕೊಳ್ಳುವ ಇವರು ತರ್ಕ, ವಿವಾದಗಳಲ್ಲಿ ನಿಸ್ಸೀಮರಾಗಿರುತ್ತಾರೆ. ಹತ್ತಿರದವರನ್ನು ತುಂಬಾ ಪ್ರೀತಿಸುವವರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top
(adsbygoogle = window.adsbygoogle || []).push({});