ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಸುರುವಾಗಿದ್ದು , ಅಲ್ಲಲ್ಲಿ ಎಲೆ ಕವಚ ಒಣಗುವ ರೋಗವು ಕಾಣಿಸಿಕೊಂಡಿದೆ. ಆದ್ದರಿಂದ ರೈತ ಬಾಂಧವರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ.
ಹಾನಿಯ ಲಕ್ಷಣಗಳು: ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ಕೆರೆ ಕೆಳಗಿನ ಅಥವಾ ನೀರಿನ ಒತ್ತಡ ಇರುವ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೋಗದ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ನಿರ್ವಹಣಾ ಕ್ರಮಗಳು: ನೀರು ಹರಿಸುವಾಗ ಜೊತೆಯಲ್ಲಿ ಸಗಣಿ ರಾಡಿ ಬಿಡುವುದು ಸೂಕ್ತ. ಸಗಣಿ ರಾಡಿ ಜೊತೆಯಲ್ಲಿ ಟ್ರೈಕೋಡರ್ಮಾವನ್ನು ಬೆರೆಸಿ ಬಿಡುವುದು ತುಂಬಾ ಉಪಯುಕ್ತ. ಸಗಣಿ ರಾಡಿಯ ಉಪಚಾರ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 1 ಗ್ರಾಂ. ಕಾರ್ಬನ್‍ಡೈಜಿಂ 50 ಡಬ್ಲ್ಯುಪಿ ಅಥವಾ 1 ಮಿ.ಲೀ. ಪ್ರೊಪಿಕೊನೊಜೋಲ್ 25 ಇ.ಸಿ. ಅಥವಾ 2 ಮಿ.ಲೀ. ಹೆಕ್ಸಾಕೋನಜೋಲ್ 5 ಇ.ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ 0.4 ಗ್ರಾಂ. ಟ್ರೈಶ್ಲಾಕ್ಸಿಸ್ಟ್ರೋಬಿನ್ 25 ಮತ್ತು 0.4 ಗ್ರಾಂ. ಟೆಬುಕೊನಜೋಲ್ 50 ಅನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಇವೆರಡರ ಸಂಯುಕ್ತ ರಾಸಾಯನಿಕ ಲಭ್ಯವಿದ್ದಲ್ಲಿ ಸಿಂಪರಣೆ ಮಾಡುವುದು.



