Connect with us

Dvgsuddi Kannada | online news portal | Kannada news online

ಭತ್ತದ ಎಲೆ ಕವಚ ಒಣಗುವ ರೋಗದ ನಿರ್ವಹಣಾ ಕ್ರಮ ಹೇಗೆ..?

Home

ಭತ್ತದ ಎಲೆ ಕವಚ ಒಣಗುವ ರೋಗದ ನಿರ್ವಹಣಾ ಕ್ರಮ ಹೇಗೆ..?

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಸುರುವಾಗಿದ್ದು , ಅಲ್ಲಲ್ಲಿ ಎಲೆ ಕವಚ ಒಣಗುವ ರೋಗವು ಕಾಣಿಸಿಕೊಂಡಿದೆ. ಆದ್ದರಿಂದ ರೈತ ಬಾಂಧವರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ.

ಹಾನಿಯ ಲಕ್ಷಣಗಳು: ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ಕೆರೆ ಕೆಳಗಿನ ಅಥವಾ ನೀರಿನ ಒತ್ತಡ ಇರುವ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೋಗದ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಿರ್ವಹಣಾ ಕ್ರಮಗಳು: ನೀರು ಹರಿಸುವಾಗ ಜೊತೆಯಲ್ಲಿ ಸಗಣಿ ರಾಡಿ ಬಿಡುವುದು ಸೂಕ್ತ. ಸಗಣಿ ರಾಡಿ ಜೊತೆಯಲ್ಲಿ ಟ್ರೈಕೋಡರ್ಮಾವನ್ನು ಬೆರೆಸಿ ಬಿಡುವುದು ತುಂಬಾ ಉಪಯುಕ್ತ. ಸಗಣಿ ರಾಡಿಯ ಉಪಚಾರ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 1 ಗ್ರಾಂ. ಕಾರ್ಬನ್‍ಡೈಜಿಂ 50 ಡಬ್ಲ್ಯುಪಿ ಅಥವಾ 1 ಮಿ.ಲೀ. ಪ್ರೊಪಿಕೊನೊಜೋಲ್ 25 ಇ.ಸಿ. ಅಥವಾ 2 ಮಿ.ಲೀ. ಹೆಕ್ಸಾಕೋನಜೋಲ್ 5 ಇ.ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ 0.4 ಗ್ರಾಂ. ಟ್ರೈಶ್ಲಾಕ್ಸಿಸ್ಟ್ರೋಬಿನ್ 25 ಮತ್ತು 0.4 ಗ್ರಾಂ. ಟೆಬುಕೊನಜೋಲ್ 50 ಅನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಇವೆರಡರ ಸಂಯುಕ್ತ ರಾಸಾಯನಿಕ ಲಭ್ಯವಿದ್ದಲ್ಲಿ ಸಿಂಪರಣೆ ಮಾಡುವುದು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

 • Home

  ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

  By

  ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

 • Home

  ಗುರುವಾರ- ರಾಶಿ ಭವಿಷ್ಯ ಜನವರಿ-4,2024

  By

  ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

 • Home

  ಮರದ ಬಾಗಿಣ ವಿಶೇಷತೆ..!

  By

  ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

 • Home

  ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

  By

  ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

 • Home

  ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

  By

  ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

Advertisement

ದಾವಣಗೆರೆ

Advertisement
To Top