ದಾವಣಗೆರೆ: ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಮೆಕ್ಕೆಜೋಳದಲ್ಲಿ ನ್ಯಾನೋ ಯೂರಿಯಾ ಬಳಕೆಯ ಕ್ಷೇತ್ರ ಪ್ರಯೋಗ ನಡೆಸಿದ್ದು, ಇದರಲ್ಲಿ ಯಶಸ್ವಿಯಾದ ಪ್ರಗತಿಪರ ರೈತರಾದ ಸಿದ್ದೇಶ್ ಜಮೀನಲ್ಲಿ ಕ್ಷೇತ್ರೋತ್ಸ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಬೇಸಾಯ ತಜ್ಞ ಮಲ್ಲಿಕಾರ್ಜುನ್, ನ್ಯಾನೋ ಯೂರಿಯಾವನ್ನು ಮೆಕ್ಕೆಜೋಳದ ಬೆಳೆ ಬಿತ್ತನೆ ಮಾಡಿದ 25 ದಿವಸದ ನಂತರ 4ml ಪ್ರತಿ ಲೀಟರ್ ನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದರಿಂದ ಮೇಲುಗೊಬ್ಬರವಾಗಿ ಯೂರಿಯಾವನ್ನು ಕೊಡುವುದನ್ನು ತಪ್ಪಿಸಬಹುದು ಎಂದರು.
ಹರಳಿನ ರೂಪದ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾವನ್ನು ಬೆಳೆಗೆ ಸಿಂಪರಣೆ ಮಾಡಿದ್ದರಿಂದ ಉತ್ತಮವಾದ ಇಳುವರಿ ನಿರೀಕ್ಷೆಯಲ್ಲಿದ್ದೇನೆ ಎಂದು ಪ್ರಗತಿಪರ ಸಿದ್ದೇಶ್ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೇಂದ್ರದ ವಿಜ್ಞಾನಿ ಸಣ್ಣ ಗೌಡರ್ ಹಾಗೂ ಅಗಸನಕಟ್ಟೆ ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.