Connect with us

Dvgsuddi Kannada | online news portal | Kannada news online

ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿ ಅಳವಡಿಸಿಕೊಳ್ಳಲು ಸಾಹಯಧನ

ದಾವಣಗೆರೆ

ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿ ಅಳವಡಿಸಿಕೊಳ್ಳಲು ಸಾಹಯಧನ

ದಾವಣಗೆರೆ: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿ ಅಳವಡಿಸಲು ಈ ಸಾಲಿನಲ್ಲಿ ಹರಿಹರ ತಾಲ್ಲೂಕಿನ ಪರಿಶಿಷ್ಟ ಜಾತಿ ವರ್ಗದ ಮತ್ತು ಪರಿಶಿಷ್ಟ ಪಂಗಡದ ರೈತಬಾಂಧವರಿಗೆ ಸಹಾಯಧನ ಲಭ್ಯವಿದ್ದು, ಈ ವರ್ಗಗಳ ಆಸಕ್ತ ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತಬಾಂಧವರು ಸುನೀಲ್ ಕುಮಾರ್ ಮೊ.ಸಂ: 9741255168, ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ ರೈತ ಸಂಪರ್ಕ ಕೇಂದ್ರ ಮತ್ತು ಸಂತೋಷಕುಮಾರ್ ಮೊ.ಸಂ: 7795103401, ಸಹಾಯಕ ತೋಟಗಾರಿಕೆ ಅಧಿಕಾರಿ, ಮಲೇಬೆನ್ನೂರು ರೈತಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಜಿ.ಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top