Connect with us

Dvgsuddi Kannada | online news portal | Kannada news online

ಕೃಷಿ ಕಾಯ್ದೆ– 2020: ಸಾಧಕ- ಬಾಧಕ ಏನು..?

ಕೃಷಿ ಖುಷಿ

ಕೃಷಿ ಕಾಯ್ದೆ– 2020: ಸಾಧಕ- ಬಾಧಕ ಏನು..?

ಈ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕಾಯ್ದೆಗಳು ಅಂದರೆ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-2020  ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ-2020 ಬಹುಮುಖ ಚರ್ಚೆಗೆ ಬಂದಿರುವ ವಿಷಯಗಳಾಗಿವೆ. ಈ ಕಾಯ್ದೆಗಳ ಪ್ರಮುಖ ಅಂಶಗಳನ್ನು ನೋಡುವುದಾದರೆ

ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-2020

 • ಲಾಭದಾಯಕ ಬೆಲೆಗಾಗಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಹಾಗೂ ಕೊಳ್ಳುವಲ್ಲಿ ಆಯ್ಕೆಯ ಸ್ವಾತಂತ್ಯ ಇರುತ್ತದೆ
 • ಎ.ಪಿ.ಎಮ್.ಸಿ ಆವರಣದ ಹೊರಗೆ ಸಮರ್ಥ, ಪಾರದರ್ಶಕ ಮತ್ತು ತಡೆರಹಿತ ಮುಕ್ತ ರಾಜ್ಯದಲ್ಲಿ ಮತ್ತು ಅಂತರ-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ
 • ಎ.ಪಿ.ಎಮ್.ಸಿ ಗಳು  ಕಾರ್ಯನಿರ್ವಹಿಸುವದನ್ನು ಮುಂದುವರೆಸುತ್ತವೆ: ಈ ಕಾಯ್ದೆ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ಮಾರ್ಗಗಳನ್ನು ಒದಗಿಸುತ್ತದೆ.
 • ಕನಿಷ್ಠ ಬೆಂಬಲ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ
 • ಕಾರ್ಯವಿಧಾನದ ಅಗತ್ಯತೆಯಂತೆ ಒಂದೇ ದಿನ ಅಥವಾ ೩ ಕೆಲಸದ ದಿನಗಳಲ್ಲಿ ರೈತರಿಗೆ ಪಾವತಿ ಮಾಡಬೇಕಾಗುತ್ತದೆ
 • ಆನ್‌ಲೈನ್ ವ್ಯಾಪಾರವನ್ನು ಮಾಡಬಹುದು

ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-2020

 • ರಾಷ್ಟ್ರೀಯ  ಚೌಕಟ್ಟಿನ ಮೂಲಕ ರೈತರು ಕೃಷಿ ವ್ಯಾಪಾರ ಸಂಸ್ಥೆಗಳು, ಸಂಸ್ಕರಣೆಗಾರರು, ಸಗಟು ವ್ಯಾಪಾರಿಗಳು, ರಫ್ತುದಾರರು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೊತೆಗೆ ಭವಿಷ್ಯದ ಕೃಷಿ ಉತ್ಪನ್ನಗಳ ಮಾರಾಟ ನ್ಯಾಯಯುತ ಮತ್ತು ಪಾರದರ್ಶಕ ಪರಸ್ಪರ ಒಪ್ಪಿದ ಸಂಭಾವನೆ ಬೆಲೆ ಚೌಕಟ್ಟಿನಲ್ಲಿ ನಿರ್ವಹಿಸಲು ಅನುಕೂಲ ಮಾಡಿಕೊಡುವುದು.
 • ಕೇಂದ್ರ ಸರಕಾರದ ಮಾದರಿ ಕೃಷಿ ಒಪ್ಪಂದಗಳಿಗೆ ಮಾರ್ಗಸೂಚಿಗಳು
 • ಉತ್ಪನ್ನಗಳ ಬೆಲೆಯನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು
 • ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ ವಿವಾದ ಪರಿಹಾರದ ಕಾರ್ಯವಿಧಾನ: ರೈತರು ಮತ್ತು ಖರೀದಾರರ ಹಕ್ಕುಗಳನ್ನು ರಕ್ಷಿಸುವುದು

ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ-2020

 • ಅಸಾಧಾರಣ ಪರಿಸ್ಥಿತಿಯಲ್ಲಿ ಮಾತ್ರ ಈ ಕಾಯ್ದೆ ಉದ್ಭವಿಸುತ್ತದೆ
 • ಯುದ್ಧ
 • ಕ್ಷಾಮ
 • ಅಸಾಧಾರಣ ಬೆಲೆ ಏರಿಕೆ
 • ನೈಸರ್ಗಿಕ ವಿಕೋಪಗಳು

ಬೆಲೆ ಏರಿಕೆಯ ಆಧಾರದ ಮೇಲೆ ಮಾತ್ರ ಸ್ಟಾಕ್ ಮಿತಿಗಳನ್ನು ಹೇರುವುದು ಮತ್ತು ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಶೇಕಡಾ 100 ಹೆಚ್ಚಳ ಮತ್ತು ಕೆಡದಂತಹ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಶೇಕಡಾ 50 ಹೆಚ್ಚಳ ಇದ್ದರೆ ಮಾತ್ರ ಅದನ್ನು ವಿಧಿಸಬಹುದು.

ಕೃಷಿ ಸುಧಾರಣೆಗಳ ಪ್ರಯೋಜನಗಳು

 •  ಕೃಷಿ ಸುಧಾರಣೆಗಳಿಂದ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ
 • ಏಕೀಕೃತ ಮಾರುಕಟ್ಟೆ
 • ರೈತರು ತಮ್ಮ ಉತ್ಪನ್ನಗಳನ್ನು ಎ.ಪಿ.ಎಮ್.ಸಿ. ಗಳ ಜೊತೆಗೆ ಬೇರೆಕಡೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ ಅಲ್ಲಿ ಮಾರಾಟ ಮಾಡಲು ಅವಕಾಶವನ್ನು ಒದಗಿಸಲಾಗಿದೆ.
 • ಎ.ಪಿ.ಎಂ.ಸಿ.ಯ ಏಕ ಸ್ವಾಮ್ಯ ಹತೋಟಿಯ ಅಂತ್ಯ
 • ಕನಿಷ್ಟ ಬೆಂಬಲ ಬೆಲೆಯು ರೈತರಿಗೆ ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುವುದು ಹಾಗೂ ಇದು ಮುಂದುವರೆಯುತ್ತದೆ.
 • ರೈತರ ಹಕ್ಕುಗಳು ಕಾನೂನಿನ ಚೌಕಟ್ಟಿನ ಒಳಗೆ ರಕ್ಷಿಸಲ್ಪಡುತ್ತವೆ
 • ಮಾರುಕಟ್ಟೆ ಶುಲ್ಕ, ತೆರಿಗೆ ಇತ್ಯಾದಿಗಳಲ್ಲಿ ಕಡಿತ ಮತ್ತು ಉತ್ತಮ ಬೆಲೆ ಆವಿಷ್ಕಾರ
 • ರೈತನ ಹೊಲದ ಸನಿಹದಲ್ಲೇ ಮೂಲ ಸೌಕರ್ಯಗಳ ಅಭಿವೃದ್ಧಿ
 • ಗುತ್ತಿಗೆ ಕೃಷಿ ಬೆಲೆ ಆಶ್ವಾಸನೆಯ ಒಂದು ರೂಪ ಮತ್ತು ಆಹಾರ ಸಂಸ್ಕರಣಾ ವಲಯದೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ
 • ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಕೂಡ ಕೃಷಿ ಲಾಭದಾಯಕವಾಗಬಹುದು

ಕೃಷಿ ಸುಧಾರಣೆಗಳ ಮೊದಲು

 • ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಂಡಿಯಲ್ಲಿ ಮಾತ್ರ ಮಾರಾಟ ಮಾಡಬಹುದು
 • ಮಧ್ಯವರ್ತಿಗಳ ಏಕಸ್ವಾಮ್ಯ
 • ವ್ಯಾಪಾರಿಗಳು ಬೆಲೆಗಳನ್ನು ಕೃತಕವಾಗಿ ಕಡಿಮೆ ಮಾಡಬಹುದು.
 • ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗ ಯಾವ ಬೆಲೆ ನೀಡಲಾಗುತ್ತದೆಯೋ ಅದನ್ನು ಒಪ್ಪಿಕೊಳ್ಳಬೇಕು.
 • ಉತ್ಪಾದಕರು ಮತ್ತು ಗ್ರಾಹಕರು ಭರಿಸುವ ಮಾರುಕಟ್ಟೆ ಶುಲ್ಕ, ಕಮೀಶನ್ ಮತ್ತು ಇತರೆ ಶುಲ್ಕಗಳನ್ನು ಪಾವತಿಸುವುದು
 • ಬೆಲೆ ವಿಸ್ತರಣೆ, ವಿಘಟಿತ ಅಥವಾ ತುಣುಕು ಮಾರುಕಟ್ಟೆಗಳು ಮತ್ತು ಮಧ್ಯವರ್ತಿಗಳ ಉದ್ದ ಸರಪಳಿ
 • ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ
 • ಯುವಕರಿಗೆ ಕೃಷಿ ಸರಕುಗಳ ವ್ಯಾಪಾರ ಮಾಡಲು ಅವಕಾಶವಿಲ್ಲ
 • ಬಹಳ ರಾಜ್ಯಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ಮಾರುಕಟ್ಟೆ ಹೊರಗಡೆ ಮಾರಾಟ ಮಾಡುವ ಸ್ವಾತಂತ್ರ್ಯ
 • ಸಣ್ಣ ಭೂ ಹಿಡುವಳಿದಾರರು ಇನ್‌ಪುಟ್ ಮತ್ತು ಔಟ್‌ಪುಟ್ ಮಾರುಕಟ್ಟೆಗಳಲ್ಲಿ ಪ್ರಮಾಣದ ಮತ್ತು ಚೌಕಾಶಿ ಮಾಡುವ ಹಕ್ಕನ್ನು ಹೊಂದಿಲ್ಲ
 • ಗುತ್ತಿಗೆ ಕೃಷಿಯು ಕೆಲವೇ ಪ್ರದೇಶದಲ್ಲಿ ಜಾರಿಯಲ್ಲಿದೆ ಮತ್ತು ಅಧಿಕಾರಿಗಳ ನಿಯಂತ್ರಣಕ್ಕೆ ಸೀಮಿತವಾಗಿದೆ
 • ರೈತರು ಮೌಲ್ಯ ಸರಪಳಿಗಳ ಭಾಗವಾಗಿಲ್ಲ
 • ಮಧ್ಯವರ್ತಿಗಳು ಮತ್ತು ಕಳಪೆ ಸಾಗಾಣೆಯಿಂದ ರಫ್ತಿನಲ್ಲಿ ಸ್ಪರ್ಧಾತ್ಮಕತೆ ಇಲ್ಲದಾಗಿದೆ

ಸುಧಾರಣೆಗಳ ನಂತರ

 • ಎಪಿಎಂಸಿ ಮಂಡಿಯಲ್ಲಿ ಮಾರಾಟ ಮಾಡಲು ಅಥವಾ ಬೇರೆ ಯಾವುದೇ ಮಾರಾಟಗಾರರನ್ನು ಆಯ್ಕೆ ಮಾಡಲು ಆಯ್ಕೆ ಸ್ವಾತಂತ್ರ್ಯ
 • ಮಾರಾಟ ಮಾಡಲು ಬಹು ಆಯ್ಕೆಗಳು
 • ಸ್ಪರ್ಧಾತ್ಮಕ ಮಾರುಕಟ್ಟೆಯಿಂದ ಉತ್ತಮ ಬೆಲೆ ದೊರೆಯುವುದು
 • ಯಾವುದೇ ಶುಲ್ಕ, ಕಮೀಶನ್ನಗಳು ಇಲ್ಲ.  ಉತ್ಪಾದಕರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ದೊಡ್ಡ ಉಳಿತಾಯ
 • ಗ್ರಾಹಕರ ಪಾವತಿಯಲ್ಲಿ ಉತ್ಪಾದಕರ ಹೆಚ್ಚಿನ ಪಾಲು.  ಸಾಗಾಣೆಯ ಖರ್ಚು ಕಡಿಮೆ. ಮಧ್ಯವರ್ತಿಗಳು ಕಡಿಮೆ ಅಥವಾ ಇಲ್ಲವೇ ಇಲ್ಲ
 • ಗ್ರಾಮೀಣ ಯುವಕರಿಗೆ ವ್ಯಾಪಾರ ಮಾಡಲು ಮತ್ತು ಸರಬರಾಜು ಕೊಂಡಿಯಾಗಲು ಅವಕಾಶ
 • ಬಾಗಿಲಲ್ಲಿಯೇ ಬೆಲೆಗೆ ಚೌಕಾಶಿ ಮಾಡಬಹುದು
 • ಎಲ್ಲ ಕೃಷಿ ಉತ್ಪನ್ನಗಳ ಮಾರಾಟದ ಸ್ವಾತಂತ್ರ್ಯ,  ದೇಶದೆಲ್ಲಡೆ ಮಾರಾಟ ಮಾಡುವಂತೆ ವಿಸ್ತರಿಸಲಾಗಿದೆ
 • ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ, ಉತ್ತಮ ಬೆಲೆ ಪಡೆಯಲು ಸಾಧ್ಯ
 • ಆಧುನಿಕ ಕೃಷಿ ಪರಿಕರಗಳ ಲಭ್ಯತೆ ಮಾಹಿತಿ, ಸೇವೆ ಮತ್ತು ಬೆಲೆ ರಕ್ಷಣೆಕೊಡುತ್ತದೆ
 • ರೈತ ಉತ್ಪಾದಕರ ಕಂಪನಿಗಳು ಸಣ್ಣ ರೈತರಿಗೆ ದರ ಚೌಕಾಸಿ ಮಾಡಲು ಹಾಗೂ ಉತ್ತಮ ಬೆಲೆ ಒದಗಿಸಲು ಸಹಾಯವಾಗುತ್ತವೆ.
 • ಮೌಲ್ಯ ಸರಪಳಿಯಲ್ಲಿ ರೈತ ಪಾಲುದಾರನಾಗಬಹುದು
 • ರಫ್ತು ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ.

ಕಾಯ್ದೆ ತಪ್ಪುಕಲ್ಪನೆ 

 • ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗುವುದಿಲ್ಲ
 • ರೈತರಿಗೆ ವಿವಾದ ಬಗೆಹರಿಸಲು ಅವಕಾಶವಿಲ್ಲ
 • ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುವುದಿಲ್ಲ
 • ರೈತ ಸಂಸ್ಥೆಗಳಿಗೆ ಲಾಭವಾಗುವುದಿಲ್ಲ
 • ಕನಿಷ್ಠ ಬೆಂಬಲ ಬೆಲೆ ಮುಂದುವರೆಯುವದಿಲ್ಲ
 • ಎಫ್‌ಸಿಐ ರೈತರಿಂದ ಖರೀದಿ ಮಾಡುವುದನ್ನು ನಿಲ್ಲಿಸುತ್ತದೆ
 • ಎಪಿಎಂಸಿ ಹೊರಗೆ ಮಾರಾಟ ಮಾಡಲು ರೈತರಿಗೆ ಪರವಾನಿಗೆ ಬೇಕು
 • ಎಪಿಎಂಸಿ ಮಾರುಕಟ್ಟೆಗಳು ಇನ್ನು  ಮುಂದೆ ಮುಚ್ಚುತ್ತವೆ.
 • ರೈತರ ಪಾವತಿಯನ್ನು ಕಾಯ್ದೆಯು ರಕ್ಷಿಸುವುದಿಲ್ಲ
 • ಕಾರ್ಪೊರೇಟ್ ಸಂಸ್ಥೆಗಳಿಂದ ಕೃಷಿ ಭೂಮಿ ಸ್ವಾಧೀನಕ್ಕೆ ಈ ಕಾಯ್ದೆಯುಕಾರಣವಾಗುತ್ತದೆ

ನಿಜಸ್ಥಿತಿ

 • ರೈತರು ಖರೀದಾರರನ್ನು ಆಯ್ಕೆ ಮಾಡಬಹುದು ಮತ್ತು ಬೆಲೆಯನ್ನು ನಿರ್ಧರಿಸಬಹುದು
 • ಸ್ಥಳೀಯ ಜಿಲ್ಲಾಧಿಕಾರಿಗಳು ಮಟ್ಟದಲ್ಲಿ ಕನಿಷ್ಠ ವೆಚ್ಚದೊಂದಿಗೆ ಸಮಯಕ್ಕೆ ಅನುಗುಣವಾಗಿ ವಿವಾದ ಪರಿಹಾರವನ್ನು ಕಾಯ್ದೆ ಉತ್ತೇಜಿಸುತ್ತದೆ
 • ಖರೀದಿದಾರರು ಅವತ್ತಿನ ದಿನವೇ ಅಥವಾ ಒಪ್ಪಂದದ ಪ್ರಕಾರ ೩ ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕು
 • ಎಲ್ಲಾ ರೈತ ಸಂಸ್ಥೆಗಳನ್ನು “ರೈತರು” ಎಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ರೈತರಂತೆಯೇ ಎಲ್ಲ ಲಾಭಗಳು ದೊರೆಯುತ್ತವೆ
 • ಕನಿಷ್ಠ ಬೆಂಬಲ ಬೆಲೆ ಮೊದಲಿನಂತೆಯೇ ಮುಂದುವರೆಯುತ್ತದೆ
 • ಎಫ್‌ಸಿಐ ಮತ್ತು ಇತರೆ ಸರಕಾರಿ ಎಜೆನ್ಸಿಗಳು ರೈತರಿಂದ ಖರೀದಿ ಮಾಡುವುದನ್ನು ಮುಂದುವರೆಸುತ್ತವೆ
 • ನೋಂದಣಿ / ವಹಿವಾಟು ಶುಲ್ಕವಿಲ್ಲದೆ ರೈತರು ಎಪಿಎಂಸಿ ಹೊರಗೆ ಉತ್ತಮ ಬೆಲೆ ನೀಡುವ ಖರೀದಿದಾರರಿಗೆ ಮಾರಾಟ ಮಾಡಬಹುದು
 • ಎಪಿಎಂಸಿ ಮಾರುಕಟ್ಟೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ
 • ಕಾಯ್ದೆಯು ರಾಜ್ಯ ಎಪಿಎಂಸಿಗಳ ಹಕ್ಕುಗಳನ್ನು ಆಕ್ರಮಿಸುತ್ತದೆ ಕಾಯ್ದೆಯು ಎಪಿಎಂಸಿಯನ್ನು ದುರ್ಬಲಗೊಳಿಸುವುದಿಲ್ಲ.  ಇದು ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ.
 • ರೈತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕಾಯ್ದೆ ಸಾಕಷ್ಟು ಮಾರ್ಗಸೂಚಿಗಳನ್ನು ಒದಗಿಸುತ್ತದೆ
 • ಕಾಯ್ದೆಯು ರೈತರ ಭೂಮಿಯನ್ನು ವರ್ಗಾಯಿಸಲು ಪ್ರತಿಬಂಧಿಸುತ್ತದೆ.

ಸಮಾಲೋಚನೆ ಪ್ರಕ್ರಿಯೆ:

 • ಕಾಯ್ದೆಗಳನ್ನು ಜಾರಿಗೆ ತರುವುದಕ್ಕಿಂತ ಮೊದಲು ಸಾಕಷ್ಟು ಪರಾಮರ್ಶೆಗಳನ್ನು ಕಳೆದ ಕೆಲ ವರ್ಷಗಳಿಂದ ನಡೆದಿವೆ.
 • ಕೃಷಿ ವಿಷಯಗಳ ಕುರಿತು ಪಾಲುದಾರರ ಸಮಾಲೋಚನೆಗಳು ಕಳೆದ ಎರಡು ದಶಕಗಳಿಂದ ವಿವಿಧ ಸರಕಾರಗಳಿಂದ ನಡೆದಿದೆ.
 • ಶ್ರೀ ಶಂಕರಲಾಲ್‌ಗುರು ನೇತೃತ್ವದ ತಜ್ಞರ ಸಮಿತಿ (2000) ಅಗತ್ಯ ಸರಕುಗಳ ಕಾಯಿದೆ, ೧೯೫೫, ನೇರ ಮಾರುಕಟ್ಟೆ ಪ್ರೋತ್ಸಾಹ ಮತ್ತು ಖಾಸಗಿ ವಲಯವು ಮಾರುಕಟ್ಟೆ ವಿಸ್ತರಣಾ ಸೇವೆಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ಶಿಫಾರಸ್ಸು ಮಾಡಿದೆ.
 • ಅಂತರ್-ಮಂತ್ರಾಲಯ ಕಾರ್ಯಪಡೆ (2002) ಮಾರುಕಟ್ಟೆ ವ್ಯವಸ್ಥೆಯನ್ನು ಪುನುರುಜ್ಜೀವನಗೊಳಿಸುವುದು, ಎಪಿಎಂಸಿ ಕಾಯ್ದೆಯಲ್ಲಿನ ಸುಧಾರಣೆಗಳನ್ನು ತರಲು ಮತ್ತು ಗುತ್ತಿಗೆ ಕೃಷಿಯನ್ನು ಉತ್ತೇಜಿಸುವುದನ್ನು ಶಿಫಾರಸ್ಸು ಮಾಡಿದೆ.
 • ಕೃಷಿ ಮಾರುಕಟ್ಟೆ ಕುರಿತು ಮಾದರಿ ಎಪಿಎಂಸಿ ಕಾಯ್ದೆ ೨೦೦೩ನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ರೂಪಿಸಲಾಗಿದೆ. ಮಾದರಿ ಎಪಿಎಂಸಿ ನಿಯಮಗಳನ್ನು ೨೦೦೭ ರಲ್ಲಿರೂಪಿಸಲಾಯಿತು.

ಮಾದರಿ ಎಪಿಎಂಸಿ ಕಾಯ್ದೆ 2003 ನ್ನು 18 ರಾಜ್ಯಗಳು ಅಂಗೀಕರಿಸಿವೆ

 • ಶ್ರೀ ಎಂ.ಎಸ್.ಸ್ವಾಮಿನಾಥನ್ (2006) ನೇತೃತ್ವದಲ್ಲಿ ರಾಷ್ಟಿçÃಯ ಕೃಷಿ ಆಯೋಗವು ಏಕೀಕೃತ ಮಾರುಕಟ್ಟೆಯನ್ನು ಪ್ರೋತ್ಸಾಹಿಸಲು ಶಿಫಾರಸ್ಸು ಮಾಡಿದೆ.
 • ವ್ಯಾಪಕವಾದ ಸಮಾಲೋಚನೆಗಾಗಿ ರಾಜ್ಯ ಸರಕಾರದ ಕೃಷಿ ಮಾರುಕಟ್ಟೆ ಉಸ್ತುವಾರಿ ಸಚಿವರ ಸಮಿತಿಯನ್ನು ರಚಿಸಲಾಯಿತು (2010)
 • ತುಂಡು ತುಂಡಾದ ಮಾರುಕಟ್ಟೆಗಳನ್ನು ತೆಗೆದುಹಾಕುವುದು ಮತ್ತು ಕೃಷಿ ಉತ್ಪಾದನೆ ಮಾರಾಟಕ್ಕಾಗಿ ರಾಷ್ಟ್ರೀಯ ಮಾರುಕಟ್ಟೆಯನ್ನು ಸ್ಥಾಪಿಸುವುದು.

5  ರಾಜ್ಯಗಳು ಅಳವಡಿಸಿಕೊಂಡಿವೆ

 • ಕೃಷಿ ಸುಗ್ರೀವಾಜ್ಞೆ (ಜೂನ್ 2020) ಗಳನ್ನು ಪ್ರಕಟಣೆ ಮಾಡುವುದಕ್ಕಿಂತ ಮೊದಲು ರಾಜ್ಯಗಳೊಡನೆ ಸತತವಾಗಿ ಸಮಾಲೋಚನೆ ಮಾಡಲಾಗಿದೆ.
 • ಕೃಷಿ ಸಮುದಾಯಾದಲ್ಲಿ, ರೈತ ಉತ್ಪಾದಕ ಕಂಪನಿಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಒಂದು ರಾಷ್ಟ್ರ, ಒಂದು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
 • ಸಾಧಕ-ಬಾಧಕಗಳ ತಿಳುವಳಿಕೆಗೆ ಒಂದೆರಡು ವರ್ಷಗಳ ಈ ಕಾಯ್ದೆಯ ಅನುಭವ ಬೇಕಾಗುತ್ತದೆ. ಬದಲಾವಣೆ ಜಗದ ನಿಯಮ.

-ಪ್ರಕಟಣೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕೃಷಿ ಖುಷಿ

To Top
(adsbygoogle = window.adsbygoogle || []).push({});