ಬೆಂಗಳೂರು: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ಸಾಧನೆ ತೋರಿದಲ್ಲಿ, ಅವರನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ವತಿಯಿಂದ ಪ್ರೋತ್ಸಾಹ ಧನವನ್ನು ಘೋಷಿಸಿದೆ.
ದಾವಣಗೆರೆ: ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ, ಲ್ಯಾಪ್ಟಾಪ್ ಕಳವು; ಆರೋಪಿಗಳ ಬಂಧನ
ಈ ಯೋಜನೆಯಡಿ ವಿವಿಧ ಹಂತಗಳ ಶಿಕ್ಷಣವನ್ನು ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅರ್ಹ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.
ಪ್ರೋತ್ಸಾಹ ಧನ ವಿವರ
- ಎಸ್ ಎಸ್ ಎಲ್ ಸಿ ಯಲ್ಲಿ ಶೇ. 60ರಿಂದ 75% ಗಳಿಸಿದ್ರೆ ₹ 7500 , ಶೇ 75% ಕ್ಕಿಂತ ಮೇಲ್ಪಟ್ಟು ₹15,000 ರೂ.
- ಪಿಯುಸಿ/ಡಿಪ್ಲೋಮೋ- ₹20,000/-
- ಪದವಿ -₹25,000/-
- ಸ್ನಾತಕೋತ್ತರ ಪದವಿ -₹30,000/-
- ವೃತ್ತಿಪರ ಪದವಿ-₹35,000/-
(ವೈದ್ಯಕೀಯ/ತಾಂತ್ರಿಕ/ಕೃಷಿ/ಪಶು
ವೈದ್ಯಕೀಯ) - ವಿಶ್ವವಿದ್ಯಾಲಯ ಮಟ್ಟದಲ್ಲಿ PG Courseಗಳ
ವಿವಿಧ ಭಯಗಳಲ್ಲಿ 1 ರಿಂದ 5 ಬ್ಯಾಂಕ್ ಪಡೆದ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ-₹50,000/-
ಇದರ ಮುಖ್ಯ ಉದ್ದೇಶ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉನ್ನತ ಶಿಕ್ಷಣದತ್ತ ಉತ್ತೇಜನ ನೀಡುವುದು ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುವುದಾಗಿದೆ.



