Connect with us

Dvgsuddi Kannada | online news portal | Kannada news online

ಹರಿಹರದಲ್ಲಿ ಫೆ. 21 ರಿಂದ ಮೆಕ್ಕೆಜೋಳ ಇ-ಟೆಂಡರ್ ಮಾರಾಟ ಆರಂಭ

ಪ್ರಮುಖ ಸುದ್ದಿ

ಹರಿಹರದಲ್ಲಿ ಫೆ. 21 ರಿಂದ ಮೆಕ್ಕೆಜೋಳ ಇ-ಟೆಂಡರ್ ಮಾರಾಟ ಆರಂಭ

ದಾವಣಗೆರೆ: ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ಹರಿಹರದ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ಫೆ. 21 ರಿಂದ ಪ್ರತಿ ಸೋಮವಾರ ಮತ್ತು ಗುರುವಾರದಂದು ಮೆಕ್ಕೆಜೋಳವನು ಇ-ಟೆಂಡರ್ ಮೂಲಕ ಮಾರಾಟ ಆರಂಭವಾಗಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಮಕ್ಕೆಜೋಳ ಉತ್ಪನ್ನವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‍ಗೆ ರೂ.1870/- ಗಳಿಗಿಂತ ಕಡಿಮೆ ಧಾರಣೆ ಆಗುತ್ತಿರುವುದು ಕಂಡುಬಂದಿದೆ. ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡಲು ಕಳೆದ ತಿಂಗಳು ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದದಲ್ಲಿ ತಿಳಿಸಿದ್ದು, ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಲ್ಲಿಯ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮೆಕ್ಕೆಜೋಳ ಉತ್ಪನ್ನಕ್ಕೆ ಇ-ಟೆಂಡರ್ ಮಾರಾಟ ಪದ್ದತಿಯನ್ನು ಅಳವಡಿಸಿಕೊಂಡು ಮಾರಾಟ ಮಾಡಲು ನಿರ್ದೇಶನ ನೀಡಿರುತ್ತಾರೆ. ಸಮಿತಿಯ ವ್ಯಾಪ್ತಿಯಲ್ಲಿ ಬೆಳೆಯುವ ಕೃಷಿ ಹುಟ್ಟುವಳಿಯಾದ ಮೆಕ್ಕೆಜೋಳವನ್ನು ಫೆ.21 ರಿಂದ ಪ್ರತಿ ಸೋಮವಾರ ಹಾಗೂ ಗುರುವಾರದಂದು ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ಇ-ಟೆಂಡರ್ ಮಾರಾಟ ಪದ್ದತಿ ಮೂಲಕ ವ್ಯಾಪಾರ ವಹಿವಾಟು ಮಾಡಲು ಆರಂಭಿಸಲಾಗುವುದು.

ರೈತಬಾಂಧವರು ತಾವು ಬೆಳೆದ ಮೆಕ್ಕೆಜೋಳ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಇ-ಟೆಂಡರ್‍ನಲ್ಲಿ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆದುಕೊಳ್ಳಬೇಕೆಂದು ಎಪಿಎಂಸಿ ಆಡಳಿತಾಧಿಕಾರಿ ಕೆ.ಬಿ ರಾಮಚಂದ್ರಪ್ಪ ಹಾಗೂ ಕಾರ್ಯದರ್ಶಿ ವಿದ್ಯಾಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top