ಡಿವಿಜಿಸುದ್ದಿ.ಕಾಂ, ದಾವಣಗೆರೆ: ಜಗಳೂರು ತಾಲೂಕಿನಲ್ಲಿ ಇಂದಿಗೂ ಕೂಡ ಹನಿ, ಹನಿ ನೀರಿಗೂ ಹಾಹಾಕಾರ ಎದುರಾಗಿದೆ. ಜನರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದು, ಇತ್ತ ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗೋಶಾಲೆ ತೆರೆಯಬೇಕು ಎಂದು ಶಾಸಕ ವಿ.ಎಸ್. ರಾಮಚಂದ್ರಪ್ಪ ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಪಂಚಾಯಿತಿ ಪ್ರಗತಿ ಪರಿಶೀಲನಸಭೆಯಲ್ಲಿ ಶಾಸಕರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಕೂಡಲೇ ಮಧ್ಯೆ ಪ್ರವೇಸಿದಿದ ಸಚಿವರು ಕೂಡಲೇ ಮುಚ್ಚಿದ ಗೋಶಾಲೆ ತೆರೆಯಲು ಗ್ರಾಮೀಣಾಭಿವೃದ್ದಿ ಸಚಿವರು ಆದೇಶ ಮಾಡಿದರು.
ಜಗಳೂರಿನಲ್ಲಿ ಹನಿ ನೀರಿಗೂ ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಗಳೂರು ತಾಲ್ಲೂಕಿನ ೮೭ ಗ್ರಾಮಗಳಲ್ಲಿ ಇಂದಿಗೂ ನೀರಿಲ್ಲದೇ ಗ್ರಾಮಕ್ಕೆ ಪ್ರತಿನಿತ್ಯ ೧೩೮ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆ ಮಾಡುತ್ತಿದೆ. ಗ್ರಾಮಗಳು ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗುವಂತಾಗಿದೆ.
ಜಾನುವಾರುಗಳಿಗಾಗಿ ತಾಲ್ಲೂಕಿನಲ್ಲಿ ಮೂರು ಕಡೆ ಮೇವಿನ ಬ್ಯಾಂಕ್ ಓಪನ್ ಮಾಡಲಾಗಿತ್ತು. ಅದರಲ್ಲಿ ಎರಡನ್ನು ಮುಚ್ಚಲಾಗಿದೆ. ಇನ್ನು ಬರಗಾಲವಿರುವುದರಿಂದ ಗೋಶಾಲೆ ಮುಂದುವರಿಸಬೇಕೆಂದು ಶಾಸಕರು ಮನವಿ ಮಾಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಈಶ್ವರಪ್ಪ ರೈತರು ಎಲ್ಲಿಯವರೆಗು ಕೇಳುತ್ತಾರೋ ಅಲ್ಲಿವರೆಗು ಮುಂದುವರಿಸಿ ಎಂದು ಸೂಚನೆ ನೀಡಿದರು. ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ನಂತರ ಜಿಲ್ಲೆಗೆ ಮೊದಲ ಭೇಟಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಗಮನಕ್ಕೆ ಬಂದಿದೆ. ನಾನು ಮತ್ತೆ ಮತ್ತೆ ಬರುತ್ತೇನೆ ನಿಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ ಕಷ್ಟ ಎಂಬ ಎಚ್ಚರಿಕೆ ನೀಡಿದರು.