ಡಿವಿಜಿ ಸುದ್ದಿ, ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನಜಾವ ಬೆಂಕಿ ಹೊತ್ತಿ ಉರಿದ ಪರಿಣಾಮ ಬಸ್‌ನಲ್ಲಿ ವಿಜಯಪುರ ಮೂಲದ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಐವರು ಮಂದಿ ಸುಟ್ಟು ಹೋಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಶೀಲಾ ರವಿ(33), ಸ್ಪರ್ಷಾ(8), ಸಮೃದ್ಧ (5), ಕವಿತಾ ವಿನಾಯಕ (29) ಮತ್ತು ನಿಶ್ಚಿತಾ(3) ಮೃತಪಟ್ಟಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಗೆ ಕುಕ್ಕೆ ಶ್ರೀ ಬಸ್ ವಿಜಯಪುರದಿಂದ ಹೊರಟಿತ್ತು. 29 ಪ್ರಯಾಣಿಕರು, ಇಬ್ಬರು ಚಾಲಕರು ಇದ್ದರು ಎಂದು ಟೆಕೆಟ್ ಬುಕ್ಕಿಂಗ್ ಏಜನ್ಸಿಯವರು ಮಾಹಿತಿ ನೀಡಿದ್ದಾರೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.



