ಡಿವಿಜಿಸುದ್ದಿ.ಕಾಂ, ದಾವಣಗೆರೆ: ಎಲ್ಲರ ಮುಗದಲ್ಲಿ ನಗು.. ಜಾತಿ, ಮತ, ಪಂಥ ಮೀರಿದ ಸಮ್ಮಿಲನ.. ಮಗುವಿನ ನಿರೀಕ್ಷೆಯಲ್ಲಿರುವ ಗರ್ಭೀಣಿಯರು.. ಹಾಲುಗಲ್ಲದ ಪುಟ್ಟ ಪುಟ್ಟ ಕಂದಮ್ಮನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಬಾಣಂತಿಯರು..…ಅಯ್ಯೋ ಇದ್ಯಾವುದೋ ಖಾಸಗಿ ಕಾರ್ಯಕ್ರಮ ಹೇಳ್ತಿದ್ದರಲ್ಲ ಅಂದುಕೊಳ್ಳಬೇಡಿ… ಇದೊಂದು ಸರ್ಕಾರಿ ಕಾರ್ಯಕ್ರಮ..
ಹೌದು, ಗರ್ಭೀಣಿಯರು ಮತ್ತು ಬಾಣಂತಿಯರಿಗೆ ಇವತ್ತು ವಿಶೇಷ ಸಂಭ್ರಮ… ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಈ ವಿನೂತನ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಸರ್ಕಾರಿ ನೌಕರರ ಭವನದಲ್ಲಿ ದಾವಣಗೆರೆ ತಾಲ್ಲೂಕಿನ ಗರ್ಭೀಣಿಯರು ಮತ್ತು ಬಾಣಂತಿಯರಿಗೆ ಸೀಮಂತ ಕಾರ್ಯ ಆಯೋಜಿಸಲಾಗಿತ್ತು.. ಶಾಸಕರು ಎಸ್. ಎ ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೈಲಜಾ ಬಸವರಾಜ್ ಮುಂದೆ ನಿಂತು ೧೦೦ ಗರ್ಭೀಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿದರು. ಅರಿಶಿಣ, ಕುಂಕುಮ, ಸೀರೆ, ರವಿಕೆ ಕೊಟ್ಟು ಉಡಿತುಂಬಿ ಸಿಹಿ ಊಟ ಬಡಿಸಲಾಯಿತು.

ಅಂಗನವಾಡಿ ಕಾರ್ಯಕರ್ತರು ಗುರುತಿಸಿದ ನೂರಕ್ಕು ಹೆಚ್ಚು ಗರ್ಭೀಣಿಯರು ಹಾಗು ಬಾಣಂತಿಯರು ಈ ಸೀಮಂತ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ವೈದ್ಯರು ಸಲಹೆ ಸೂಚನೆ ನೀಡಿದರು. ಸರ್ಕಾರದಿಂದಲೇ ಇಂತಹದೊಂದು ಗೌರವ ಸಿಕ್ಕಿರುವುದಕ್ಕೆ ಮಹಿಳೆಯರು ಸಂತಸ ವ್ಯಕ್ತಪಡಿದರು.

ಇತ್ತಿಚೆಗೆ ಗರ್ಭೀಣಿಯರು ಮತ್ತು ಬಾಣಂತಿಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಅವರಿಗೆ ಸರಿಯಾಗಿ ಪೌಷ್ಠಿಕ ಆಹಾರ ದೊರೆಯುತ್ತಿಲ್ಲ ದೂರು ಕೇಳಿಬಂದಿತ್ತು. ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನೂತನ ಕಾರ್ಯಕ್ರಮ ಆಯೋಜಿಸಿತ್ತು.



