Connect with us

Dvg Suddi-Kannada News

ಗೋಗ್ರೀನ್  ಸಂಸ್ಥೆಯಿಂದ ಬನ್ನಿ ಮಂಟಪ ಸ್ವಚ್ಛತೆ

ದಾವಣಗೆರೆ

ಗೋಗ್ರೀನ್  ಸಂಸ್ಥೆಯಿಂದ ಬನ್ನಿ ಮಂಟಪ ಸ್ವಚ್ಛತೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ:ಗೋಗ್ರೀನ್ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ಪ್ರವೀಣ್ ಫಾರ್ಮ  ಸಹಯೋಗದೊಂದಿಗೆ  ಭಾನುವಾರ ನಗರದ  ಜೈನ ಬಡಾವಣೆಯ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ ಅವರಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನವ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಬನ್ನಿ ಮರ ಪೂಜೆ  ಮಹಿಳೆಯರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬನ್ನಿ ಮರ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಛತಾ ಕಾರ್ಯಕ್ಕೆ ದೇವಸ್ಥಾನ  ಆರ್ಚಕರು ಸ್ಥಳೀಯ ಮಕ್ಕಳು ಸಹ ಸಹಕಾರ ನೀಡಿ ಸ್ವಚ್ಛತಾ ಕಾರ್ಯ ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮ ದ ಅಧ್ಯಕ್ಷತೆ  ವಹಿಸಿದ್ದ  ಸುರೇಶ್ ಕೆ.ಎನ್ ಮಾತನಾಡಿ, ಸ್ವಚ್ಛತೆ ಕಾರ್ಯ ಕೇವಲ ತೋರಿಕೆಗಾಗಿ ಮಾಡುವುದಲ್ಲ. ಅದು ಸ್ವಯಂ ಪ್ರೇರಣೆಯಿಂದ ಕಾರ್ಯರೂಪಕ್ಕೆ ಬರಬೇಕು. ಆಗ ನಮ್ಮ ಸುತ್ತಮುತ್ತಲಿನ ಪರಿಸರವಾಗಿ ಕಾಣಲು ಸಾಧ್ಯ ಎಂದರು

ಆಯೋಜಕ ಪ್ರವೀಣ್  ಮಾತನಾಡಿ, ಪ್ರತಿ  ಬಡಾವಣೆ ಗಳಲ್ಲೂ , ಆಯಾ  ಬಡಾವಣೆಯ ಯುವಕರು ಈ ರೀತಿಯ ಜನರಲ್ಲಿ  ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ನಮ್ಮ ದೇಶ ಸುಂದರ ಆಗುವ ಕಾಲ ದೂರ ಇಲ್ಲ ಎಂದು ತಿಳಿಸಿದರು.

ಪ್ರವೀಣ್ ಕುಮಾರ್ ಮಾತನಾಡಿ, ಗೋ ಗ್ರೀನ್ ಸಂಸ್ಥೆ ಮತ್ತು ರೋಟರಾಕ್ಟ್ ಸಂಸ್ಥೆಯ ಈ  ಕಾರ್ಯ ಸ್ವಯಂ ಸೇವಕರಿಗೆ ಮಾದರಿಯಾಗುವಂತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ  ಶ್ರೀಕಾಂತ್ ಬಗಾರೆ,  ಮಹಮದ್ ಗೌಸ್,  ಅಶೋಕ್  ರಾಕುಂಡೆ,  ರೋಟಾರಾಕ್ಟ್  ಸಂಸ್ಥೆಯ ಅಧ್ಯಕ್ಷೆ ಮಾನಸ ವಿ.ಎಸ್,  ಕಾರ್ಯದರ್ಶಿ ಚೇತನ್ ಕುಮಾರ್, ಉಪಾಧ್ಯಕ್ಷ ಜ್ಯೋತಿ  ಎಸ್,  ಹಿರೇಮಠ್,  ಶ್ರೀಧರ್ , ಋತ್ವಿಕ್, ಕಿರಣ್,  ದೇವಸ್ಥಾನದ ಪ್ರಧಾನ ಅರ್ಚಕರು ಹಾಗು ಬಡಾವಣೆಯ ಸಾರ್ವಜನಿಕರು  ಮಕ್ಕಳು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top