Connect with us

Dvgsuddi Kannada | online news portal | Kannada news online

ಗಣೇಶ ವಿಸರ್ಜನೆ ಹಿನ್ನೆಲೆ ಭಾನುವಳ್ಳಿಯಲ್ಲಿ 2 ಸಾವಿರ ಸಸಿ ನೆಟ್ಟ ಏಕಲವ್ಯ ಸಂಘಟನೆ

ದಾವಣಗೆರೆ

ಗಣೇಶ ವಿಸರ್ಜನೆ ಹಿನ್ನೆಲೆ ಭಾನುವಳ್ಳಿಯಲ್ಲಿ 2 ಸಾವಿರ ಸಸಿ ನೆಟ್ಟ ಏಕಲವ್ಯ ಸಂಘಟನೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಸಾಮಾನ್ಯವಾಗಿ ಗಣೇಶ್ ವಿಸರ್ಜನೆ ವೇಳೆ ಯುವಕರು ಸಂಭ್ರಮದಿಂದ ಕುಣಿದು, ಕುಪ್ಪಳಿಸುವುದನ್ನು ನೋಡಿದ್ದೇವೆ. ಆದ್ರೆ, ಗಣೇಶ ಮೆರವಣಿಗೆ ವೇಳೆ ಪರಿಸರ ಜಾಗೃತಿ ಮೂಡಿಸುವ ಯುವಕರು ಸಿಗದೋ ಅಪರೂಪ. ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವರು ಹರಿಹರ ತಾಲ್ಲೂಕಿನ ಉತ್ಸಾಹಿ ಯುವಕರು.

ಹರಿಹರ ತಾಲ್ಲೂಕಿನ ಭಾನುವಳ್ಳಿಯ ಏಕಲವ್ಯ ಯುವಕರ ಸಂಘದಿಂದ ಈ ಬಾರಿಯ ಗಣೇಶ ಉತ್ಸವನ್ನು ವಿಶೇಷವಾಗಿ ಆಚಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗಣೇಶ ವಿಸರ್ಜನೆ ವೇಳೆ ಉತ್ಸಾಹಿ ಯುವಕರು ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಿದಲ್ಲದೆ, ಸ್ವತಃ ಊರ ತುಂಬೆಲ್ಲಾ 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಕರೆ ನೀಡಿದ್ದಾರೆ.

ಜಾಗತಿಕ ತಾಪಮಾನ, ವರ್ಷದಿಂದ ವರ್ಷಕ್ಕೆಬದಲಾಗುತ್ತಿರುವ  ಹವಾಮಾನ  ವೈಪರೀತ್ಯ   ಮತ್ತು ಅರಣ್ಯ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಏಕಲವ್ಯ ಸಂಘಟನೆ ಕಾರ್ಯ ಎಲ್ಲರು ಮೆಚ್ಚುವಂಹದು. ಇಂತಹ ಕಾರ್ಯಗಳ ಮೂಲಕ ಸಾರ್ವಜನಿಕರಲ್ಲಿಯೂ ಪರಿಸರ ಜಾಗೃತಿ ಮೂಡಿಸಿದಂತಾಗುತ್ತದೆ ಜತೆಗೆ ಹಬ್ಬ-ಹರಿದಿನಕ್ಕೂ ಮಹತ್ವ ಬಂದತಾಗುತ್ತದೆ.

ಮರ ಬೆಳೆಸಿ ಪರಿಸರವನ್ನು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಭಾನುವಳ್ಳಿ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಸಸಿಗಳನ್ನು ತಂದು, ಸಣ್ಣ ಸಣ್ಣ ಬೀದಿ, ಮುಖ್ಯ ರಸ್ತೆ ಬದಿಯಲ್ಲಿ ನೆಟ್ಟಿದ್ದಾರೆ. ಈ  ಕಾರ್ಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಎಎಸ್‌ಐ ಮಲ್ಲಿಕಾಜುನ್, ಭಾನುವಳ್ಳಿಯ ಪಿಡಿಒ ರೇಣುಕಾಬಾಯಿ, ಏಕಲವ್ಯ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಭಾನುವಳ್ಳಿಯ ಗ್ರಾಮಸ್ಥರ ಭಾಗಿಯಾಗಿದ್ದರು.

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ:9844460336, 7483892205

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

0 Comments

  1. Siddappabt

    September 5, 2019 at 6:22 pm

    Dharvada jeela harihara thaluku Bhanuvalliyali garmadali gannesha visrajaneya noutana kaarya krama dj badalu parisara ulisi naadu belasi yamba
    2000 savira sasi didagalannu bhanuvalliyali shale devastana raste galli netideve iadake poulice sibandi hagou midiya yalla janaru hekalve sangada yala sadaseru seri vinoutana karyakarmadavannu amidoundeve

  2. PRAKASH

    September 8, 2019 at 10:21 am

    Nice programme
    Good job guys…👌

Leave a Reply

Your email address will not be published. Required fields are marked *

More in ದಾವಣಗೆರೆ

To Top