ಡಿವಿಜಿ ಸುದ್ದಿ.ಕಾಂ
ದಾವಣಗೆರೆ: ವಿದ್ಯಾರ್ಥಿ ಜೀನದಲ್ಲಿ ಪದವಿ ಶಿಕ್ಷಣ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ಶಿಕ್ಷಣ ಕಡೆ ಹೆಚ್ಚಿನ ಒತ್ತು ಕೊಡುವುದರ ಮೂಲಕ ಉತ್ತಮ ಸಾಧನೆ ಮಾಡಿ ಎಂದು ಶಾಸಕ ರವೀಂದ್ರನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 2019-20 ನೇ ಸಾಲಿನ ಪಠ್ಯಪೂರಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು,ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಕಡೆ ಹಚ್ಚಿನ ಒತ್ತು ಕೊಡಿಬೇಕು.ಅದರಲ್ಲೂ ಪದವಿ ಹಂತ ವಿದ್ಯಾರ್ಥಿ ಜೀನದ ಪ್ರಮುಖ ಘಟ್ಟ, ಈ ಹಂತದಲ್ಲಿ ಕಲಿಕೆ ಕಡೆ ಹೆಚ್ಚಿನ ಆಸಕ್ತಿ ವಹಿಸಿ. ಇದಲ್ಲದೆ ಐಎಎಸ್, ಕೆಎಎಸ್, ಐಪಿಎಸ್ ನಂತಹ ಹುದ್ದೆಗಳ ಕಡೆ ಹೆಚ್ಚಿನ ಗಮನ ಕೊಡಿ ಸಲಹೆ ನೀಡಿದರು.
ಇನ್ನು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ದಾವಣಗೆರೆ ಮಹಿಳಾ ಕಾಲೇಜು ಈಗಾಗಲೇ ಕ್ರೀಡಾ ಚಟುವಟಿಕೆಯಲ್ಲಿ ಹೆಸರು ಮಾಡಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಜಗನ್ನಾಥ್ ನಾಡಿಗೇರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಪ್ರಾಂಶುಪಾಲ ದಾದಾಫೀರ್ ನವಿಲೇಹಾಳ್, ಕಾಲೇಜ್ ವ್ಯವಸ್ಥಾಪಕ ಶಿವಮೂರ್ತಿ, ಅಧೀಕ್ಷಕ ಶೇಷಪ್ಪ ಟಿ. ಉಪಸ್ಥಿತರಿದ್ದರು.



