ಡಿವಿಜಿಸುದ್ದಿ.ಕಾಂ ದಾವಣಗೆರೆ : ಪ್ರತಿ ದಿನ ಆರಾಮವಾಗಿ ಕಚೇರಿಗೆ ಬರುತ್ತಿದ್ದ ದಾವಣಗೆರೆ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ, ಇವತ್ತು ಎಂದಿನಂತೆ ಇರಲಿಲ್ಲ… ಪ್ರತಿ ದಿನ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಲೆದಾಡುಸುತ್ತಿದ್ದ ಅಧಿಕಾರಿಗಳು ಇವತ್ತು ಎದ್ದನೋ , ಬಿದ್ದನೋ.. ಅನೋ ರೀತಿ ಓಡೋಡಿ ಬಂದಿದ್ರು.

ಹೌದು, ದಾವಣಗೆರೆ ತಾಲ್ಲೂಕು ಕಚೇರಿಯ ಅಧಿಕಾರಿಗಳಿಗೆ ಇವತ್ತು ಬಿಗ್ ಶಾಕ್ ಕಾದಿತ್ತು. ಬೆಳ್ಳಂ ಬೆಳಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ದಾವಣಗೆರೆ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಇದರಿಂದ ಆತಂಕಕ್ಕೆ ಒಳಗಾಗಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಎದ್ದನೋ, ಬಿದ್ದನೋ ಎಂಬಂತೆ ಓಡೋಡಿ ಬಂದು ಹಾಜರಾಗುತ್ತಿದ್ದರು.

ಜಿಲ್ಲಾಧಿಕಾರಿಗಳ ದಿಢೀರ್ ಭೇಟೆ ದಾವಣಗೆರೆ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಒಂದು ರೀತಿ ಬಿಗ್ ಶಾಕ್ ಆಗಿತ್ತು. ಸಮಯಕ್ಕೆ ಸರಿಯಾಗಿ ಹಾಜರಾಗದೇ ನಮ್ಮನ್ನು ಯಾರು ಕೇಳೋರು ಎನ್ನುವಂತಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಭೇಟಿಯಿಂದ ಬೆಚ್ಚಿ ಬಿದ್ದಿದ್ದರು.
ಜಿಲ್ಲಾಧಿಕಾರಿಗಳು ಹಾಜರಾತಿ ಬುಕ್ ನೋಡಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಇನ್ನು, ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೆ ತಾಲ್ಲೂಕು ಕಚೇರಿ ಸಿಬ್ಬಂದಿಗಳು ತಡವರಿಸಿದ್ರು. ಸರಿಯಾಗಿ ಕೆಲಸ ನಿರ್ವಹಿಸದ ಮತ್ತು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಿದರು.

ಇನ್ನು ವಿವಿಧ ಯೋಜನೆ ಅಡಿಯಲ್ಲಿ ಪ್ರಮಾಣಪತ್ರ ಪಡೆಯಲು ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದರು.ಸಾರ್ವಜನಿಕರಿಂದ ದೂರು ಆಲಿಸಿದ ನಂತರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



