ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾರ್ವಜನಿಕ ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ದುರ್ಗಾ ದೇವಿ ಮೆರವಣಿಗೆ ಆಯೋಜಿಸಲಾಗಿತ್ತು.
ನಿಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಿಂದ ಆರಂಭವಾದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಿದರು.

ಕುಂಭ ಹೊತ್ತ ಮಹಿಳೆಯರೊಂದಿಗೆ ನಗರದಾದ್ಯಂತ ಮೆರವಣಿಗೆ ನಡೆಯಿತು. ನಿಟುವಳ್ಳಿ ದೇವಸ್ಥಾನದಿಂದ 60 ಅಡಿ ರಸ್ತೆ , ಎಚ್.ಕೆ.ಆರ್ವೃತ್ತ , ಶಿವಪ್ಪ ವೃತ್ತ , ಜಯದೇವ ವೃತ್ತ, ಪಿ.ಬಿ.ರಸ್ತೆ ಮೂಲಕ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಮ್ಮನಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವರಗೊಳ್ಳ ಮಠದ ಶ್ರೀಗಳು, ಸಾರ್ವಜನಿಕ ದಸರಾ ಮಹೋತ್ಸವ ಸಮಿತಿಯ ಸಂಚಾಲಕ ರಾಜಶೇಖರ್.ಎನ್, ಕೆ.ಬಿ.ಶಂಕರನಾರಾಯಣ, ಯಶವಂತ ರಾವ್ ಜಾಧವ್, ವೀರೇಶ್ ಎಸ್.ಟಿ, ರಾಜನಹಳ್ಳಿ ಶಿವಕುಮಾರ್, ರವೀಂದ್ರ, ಮಲ್ಲಿಕಾರ್ಜುನ, ಕೊಟ್ರೇಶ್, ದುರ್ಗೇಶ್, ಕೆ.ಜಿ. ಕಲ್ಲಪ್ಪ, ಮಂಜುನಾಥ, ಶಶಿ, ಭೂಮಿಕ ಸ್ಟುಡಿಯೋ ಮಲ್ಲಿಕಾರ್ಜುನ, ಅರುಣ್ ಉಗ್ಗೇನಹಳ್ಳಿ, ಯೋಗೀಶ್ ಭಟ್, ವೀರೇಶ್ ಪೈ, ಸವಿತಾ ರವಿ ಕುಮಾರ್, ಭಾಗ್ಯಮ್ಮ ದೇವರಾಜ್, ರೇಖಾ ರಾಜು, ಲಕ್ಷ್ಮೀ ಉಮೇಶ್, ಮಂಜುಳಮ್ಮ, ನೇತ್ರಾವತಿ ಇನ್ನಿತರರು ಉಪಸ್ಥಿತರಿದ್ದರು.

 
		 
		 
		 
		 
		

