ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ರಾಜ್ಯ ಮತ್ತು ಕೇಂದ್ರ ಸರ್ಕಾರ ನೆರೆ ಪರಿಹಾರ ಘೋಷಿಸುವಲ್ಲಿ ವಿಫಲವಾಗಿವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯುಐ ವತಿಯಿಂದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವಾರದ ನಂತರ ಮೊದಲ ಸಲ ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಹೊರಗಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಕಾರರನ್ನು ಕೂಡಲೇ ಪೊಲೀಸರು ಬಂಧಿಸಿದರು.
ಕರ್ನಾಟಕ ರಾಜ್ಯದಲ್ಲಿ 103 ತಾಲೂಕುಗಳು ಪ್ರವಾಹ ಸುಮಾರು 35 ಲಕ್ಷ ದಷ್ಟು ಎಕರೆ ಬೆಳೆ ನಾಶ 22 ಜಿಲ್ಲೆಗಳು ಬರಗಾಲ ತುತ್ತಾಗಿದ್ದರೂ, ಪರಿಹಾರ ಘೋಷಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ಸಿನ ಜಿಲ್ಲಾ ಉಪಾಧ್ಯಕ್ಷರು ಸಾಗರ್.ಎಲ್.ಹೆಚ್, ಎನ್.ಎಸ್.ಯು.ಐ.ಜಿಲ್ಲಾ ಅಧ್ಯಕ್ಷರು ಅಲಿ ರೆಹಾಮತ್, ರಾಜ್ಯ ಕಾರ್ಯದರ್ಶಿಗಳು ಮುಜಾಹಿದ್ ಪಾಷಾ , ರಾಜೀವ್ ಗಾಂಧಿ ವರ್ಬಲ್ ಗೇಟ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಇಂಗಳೇಶ್ವರ, ಯುವ ಕಾಂಗ್ರೆಸ್ ಕಾರ್ಯಕರ್ತರಾದ ಆರ್ .ಸುರೇಶ್ ಕಡತಿ, ಶಿವಕುಮಾರ್, ಕಮರ್ ಅಲಿ ಖಾನ್, ಸೈಯ್ಯದ್ ಅಪು ಭಾಗಿಯಾಗಿದ್ದರು.




Thank u for dvgsuddi ur response thank you for your news operating