ಡಿವಿಡಿಸುದ್ದಿ.ಕಾಂ, ಬೆಂಗಳೂರು: ಚಂದ್ರನ ಮೇಲ್ಮೈನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಇರುವಾಗಲೇ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಇಸ್ರೋದ ಸಂಪರ್ಕ ಕಡಿದುಕೊಂಡಿತು. ಇದರಿಂದ ಬಹು ನಿರೀಕ್ಷಿತ ಚಂದ್ರನ ಕೆಳಮಟ್ಟದಲ್ಲಿ ನೆಲೆಗೊಳ್ಳಿಸುವ ಇಸ್ರೋ ವಿಜ್ಞಾನಿಗಳ ಮತ್ತು ಕೋಟ್ಯಂತರ ಭಾರತೀಯರ ಕನಸಿಗೆ ಸಣ್ಣ ಹಿನ್ನೆಡೆಯಾಗಿದೆ.
ಇಸ್ರೋ, ನಿರೀಕ್ಷಿತವಾಗಿ ಚಂದ್ರಯಾನ ಯಶಸ್ವಿ ಆಗದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಇದೊಂದು ಸಣ್ಣ ಸಾಧನೆಯಲ್ಲ. ಕೆಲವೊಮ್ಮೆ ಏರಿಳಿತ ಆಗುವುದು ಸಹಜ. ನೀವು ಯಶಸ್ವಿನತ್ತ ಗಮನಹರಿಸಿ ಎಂದು ಟ್ವಿಟ್ ಮೂಲಕ ಧೈರ್ಯ ತುಂಬಿದ್ದಾರೆ.
India is proud of our scientists! They’ve given their best and have always made India proud. These are moments to be courageous, and courageous we will be!
Chairman @isro gave updates on Chandrayaan-2. We remain hopeful and will continue working hard on our space programme.
— Narendra Modi (@narendramodi) September 6, 2019
ಹೌದು, ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ದೇಶ ಸಂಭ್ರಮದಲ್ಲಿ ಮುಳುಗೇಳಬೇಕಿತ್ತು. ಆದರೆ ನಿರೀಕ್ಷಿತ ಸಂದೇಶ ಬರದೆ ಸೋಲು-ಗೆಲುವಿನ ತ್ರಿಶಂಕು ಸ್ಥಿತಿಯಲ್ಲಿ ವಿಜ್ಞಾನಿಗಳು ಮತ್ತು ಅಸಂಖ್ಯಾತ ಭಾರತೀಯರಿದ್ದಾರೆ.
ಈ ಬಗ್ಗೆ ಪ್ರಧಾನಿ ಬೆಂಗಳೂರಿನಲ್ಲಿ ಪ್ರಧಾನಿ ಇಸ್ರೋ ವಿಜ್ಞಾನಗಳನ್ನು ಉದ್ದೇಶಿಸಿ ಮಾತನಾಡಿದರು.
Watch Live! https://t.co/mpfYg085Q8
— PMO India (@PMOIndia) September 7, 2019
ಜುಲೈ 22ರಂದು ಚಂದ್ರಯಾನ ನೌಕೆ ಭೂಮಿಯಿಂದ ನಭಕ್ಕೆ ಚಿಮ್ಮಿತ್ತು. ಇದಕ್ಕೂ ಮೊದಲು ಸಣ್ಣ ತಾಂತ್ರಿಕ ದೋಷದಿಂದಾಗಿ ಜುಲೈ 15ರಲ್ಲೊಮ್ಮೆ ಉಡಾವಣ ಮುಂದೂಡಲಾಗಿತ್ತು. ಇದಾದನಂತರ ನಿಧಾನವಾಗಿ ಚಂದ್ರನ ಧಾವಿಸಿತ್ತು.
ಭೂಮಿಯ ಮೇಲ್ಮಟ್ಟದ ಕಕ್ಷೆಗಳಿಗೆ ನೌಕೆಯನ್ನು ನೆಲೆಗೊಳಿಸುವುದು, ಭೂಮಿಯ ಕಕ್ಷೆಯಿಂದ ಸೌರವ್ಯೂಹದ ಕಕ್ಷೆಗೆ ಕಳುಹಿಸಿ ಅಲ್ಲಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಹಂತಗಳೆಲ್ಲಾ ಯಶಸ್ವಿಯಾಗಿತ್ತು.
ಚಂದ್ರನ ಕೆಳಮಟ್ಟದ ಕಕ್ಷೆಗಳಲ್ಲಿ ನೆಲೆಗೊಳಿಸುವ ಕಾರ್ಯಗಳೆಲ್ಲವೂ ನಡೆದು , ಸೆಪ್ಟೆಂಬರ್ 7ರ ಶನಿವಾರ ಮುಂಜಾನೆ ನೌಕೆ ಹೊತ್ತೊಯ್ದಿದ್ದ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಾಗಿತ್ತು. ಲ್ಯಾಂಡರ್ ಒಳಗಿದ್ದ ಪ್ರಜ್ಞಾನ್ ರೋವರ್ ರೆಕ್ಕೆ ಬಿಚ್ಚಿ ಚಂದ್ರನ ಮೇಲ್ಮೈ ಮೇಲೆ ಓಡಾಡಬೇಕಿತ್ತು.
ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿತ್ತು.ಬರೋಬ್ಬರಿ 47 ದಿನಗಳ ನಂತರ ಶನಿವಾರ ಮುಂಜಾನೆ 1 ಗಂಟೆ 37 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲ್ಮೈನತ್ತ ಲ್ಯಾಂಡರ್ ತನ್ನ ಪಯಣ ಆರಂಭಿಸಿತ್ತು. ಲ್ಯಾಂಡರ್ ಚಂದ್ರನತ್ತ ಯೋಜನೆಯಂತೆ ತನ್ನ ಚಲನೆ ಆರಂಭಿಸಿದ್ದರಿಂದ ಇಸ್ರೋ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು.
ಲ್ಯಾಂಡರ್‌ನಲ್ಲಿದ್ದ ಎಂಜಿನ್‌ಗಳನ್ನು ಚಾಲನೆಗೊಳಿಸಿ, ಅದರ ವೇಗವನ್ನೂ ಹಂತ ಹಂತವಾಗಿ ಯಶಸ್ವಿಯಾಗಿ ತಗ್ಗಿಸಲಾಗಿತ್ತು. ಆದರೆ ಇನ್ನೇನು ಚಂದ್ರನ ಮೇಲ್ಮೈನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಇದೆ ಎನ್ನುವಾಗ ಲ್ಯಾಂಡರ್ ಇಸ್ರೋದ ಸಂಪರ್ಕ ಕಡಿದುಕೊಂಡಿತು.ಇದರಿಂದ ಕೆಲ ಹೊತ್ತು ಇಸ್ರೋದ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ಎಲ್ಲರಲ್ಲಿ ಆತಂಕ ಮೂಡಿತ್ತು.ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ ಸಿಗುವ ಸಾಧ್ಯತೆ ಇದೆ.