Connect with us

Dvgsuddi Kannada | online news portal | Kannada news online

ಸಿಸಿಬಿ ನೋಟಿಸ್: ನಟಿ ರಾಗಿಣಿ ದ್ವಿವೇದಿ ಮೊದಲ ಪ್ರತಿಕ್ರಿಯೆ ಏನು ಗೊತ್ತಾ ..?

ಪ್ರಮುಖ ಸುದ್ದಿ

ಸಿಸಿಬಿ ನೋಟಿಸ್: ನಟಿ ರಾಗಿಣಿ ದ್ವಿವೇದಿ ಮೊದಲ ಪ್ರತಿಕ್ರಿಯೆ ಏನು ಗೊತ್ತಾ ..?

ಡಿವಿಜಿ ಸುದ್ದಿ, ಬೆಂಗಳೂರು: ಸ್ಯಾಂಡಲ್‍ ವುಡ್ ಡ್ರಗ್ ಮಾಫಿಯಾ ಕುರಿತು ತಮಗೆ ಸಿಸಿಬಿ ನೀಡಿರುವ  ನೋಟಿಸ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕ ನೀಡಿದ್ದಾರೆ.

ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ನಿಜ. ಕಡಿಮೆ ಅವಧಿಯಲ್ಲಿ ನೋಟಿಸ್ ನೀಡಿದ ಹಿನ್ನೆಲೆ ನಾನು ವಿಚಾರಣೆಗೆ ಹಾಜರಾಗುತ್ತಿಲ್ಲ. ನೋಟಿಸ್ ಕೊಟ್ಟ ಬಗ್ಗೆ ನನ್ನ ಪರವಾಗಿ ಕಾಳಜಿ ಇದೆ.ನಮ್ಮ ವಕೀಲರು ಪೊಲೀಸರು ಮುಂದೆ ಹಾಜರಾಗಿ ನಮ್ಮ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ragini 2

ಸಮಯ ಕಡಿಮೆ ಇರುವ  ಹಿನ್ನೆಲೆ ಸೋಮವಾರ ಸಿಸಿಬಿ ಪೊಲೀಸರ ವಿಚರಣೆಗೆ ಹಾಜರಾಗುತ್ತೇನೆ. ಪೊಲೀಸರ ನೀಡಿರುವ ನೋಟಿಸ್ ಪ್ರಕಾರ ವಿಚಾರಣೆಯಲ್ಲಿ ಭಾಗಿಯಾಗುವುದು ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯ. ಪೊಲೀಸರಿಂದ ಮರೆ ಮಾಡುವ ವಿಷಯಗಳಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೂ ನನಗೂ ಸಂಬಂಧವಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಕೃತಜ್ಞತೆ ಎಂದು ರಾಗಿಣಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ .

ಬುಧವಾರ ರಾಗಿಣಿ ಆಪ್ತ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನೋಟಿಸ್ ನೀಡುತ್ತಿದ್ದಂತೆ ನಟಿ ರಾಗಿಣಿ ಕಾನೂನು ತಜ್ಞರ ಮೊರೆ ಹೋಗಿದ್ದರು. ಇದೀಗ ತಮ್ಮ ಪ್ರತಿಕ್ರಿಯೆ ಟ್ವೀಟ್ ಮೂಲಕ ನೀಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top