Connect with us

Dvgsuddi Kannada | online news portal | Kannada news online

ಇಂಟರ್ ನೆಟ್ ಸದ್ಬಳಕೆ ಮಾಡಿಕೊಳ್ಳಿ: ಅರವಿಂದ್ ಕುಲಕರ್ಣಿ

ದಾವಣಗೆರೆ

ಇಂಟರ್ ನೆಟ್ ಸದ್ಬಳಕೆ ಮಾಡಿಕೊಳ್ಳಿ: ಅರವಿಂದ್ ಕುಲಕರ್ಣಿ

ಡಿವಿಜಿ ಸುದ್ದಿ, ದಾವಣಗೆರೆ: ಇಂಟರ್ ನೆಟ್ ಮೂಲಕ ಜ್ಞಾನ ಸಂಪಾದನೆಗೆ ಸಾಕಷ್ಟು    ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿ ವಿಂಗ್ ಕಮಾಂಡರ್ ಅರವಿಂದ ಕುಲ್ಕರ್ಣಿ ಸಲಹೆ ನೀಡಿದರು.

ನಗರದ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ ಮೆಂಟ್ ಅಂಡ್ ರಿಸರ್ಚ್ ನ 2019-20 ನೇ ಸಾಲಿನ ಶೈಕ್ಷಣಿಕ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ  ತರಗತಿಯಲ್ಲಿ ದೊರೆತರೆ, ಪ್ರಾಯೋಗಿಕ ಜ್ಞಾನ ಸ್ವಯಂ ಪ್ರೇರಣೆಯಿಂದ ಬರುವಂತಹದು. ಇದಕ್ಕೆ ಆಧುನಿಕ ತಂತ್ರಜ್ಞಾನ ಪೂರಕವಾಗಿದ್ದು,ಇಂಟರ್ ನೆಟ್ ಮೂಲಕ ಜ್ಞಾನ ಸಂಪಾದಿಸಿ ಯಶಸ್ಸು ಗಳಿಸಬಹುದು ಎಂದರು.

ತಜ್ಞ ಸಲಹೆಗಾರ ಹರಿನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಂದೇಹಗಳನ್ನು ಕೂಡಲೇ ಪರಿಹರಿಸಿಕೊಳ್ಳುವ ಮೂಲಕ ತರಗತಿಯಲ್ಲಿ ಉತ್ತಮ ಜ್ಞಾನರ್ಜನೆ ಮಾಡಿಕೊಳ್ಳಿ ಎಂದರು. ಬೆಂಗಳೂರಿನ ವಾಣಿಜ್ಯ ತರಬೇತುದಾರ ಅಮಿತ್ ಸೌಂದಲ್ ಗೇಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬಲವಂತ ಕಲಿಕೆಯಿಂದ ಪ್ರಯೋಜನವಿಲ್ಲ, ಆಸಕ್ತಿಯ ಕಲಿಕೆಯೇ ಭವಿಷ್ಯ ಎಂದರು.

ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವಾನಂದ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದು ಪೋಷಕರು ನಿರೀಕ್ಷಿಸುವುದು ಸಹಜ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣದ ಸಂಕಲ್ಪ ಹೊಂದಿರಬೇಕೆಂದರು.  ಡಾ.ನವೀನ್ ನಾಗರಾಜ್, ಪ್ರೊ.ಸತೀಶ್ ಡಿ.ರಾಯ್ಕರ್, ಪ್ರೊ.ಸುಜಿತ್, ಪ್ರೊ.ಶೃತಿ ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top