ಡಿವಿಜಿಸುದ್ದಿ.ಕಾಂ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯಕ್ಕೆ ಜಿಲ್ಲಾ ಬಿಜೆಪಿ ಘಟಕ ಮತ್ತು ಭಾರತೀಯ ರೈತ ಒಕ್ಕೂಟದಿಂದ ಗುರುವಾರ ಭದ್ರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲಾಯಿತು.
ಸಂಸದ ಜಿ.ಎಂ ಸಿದ್ದೇಶ್ವರ ನೇತೃತ್ವದಲ್ಲಿ ಶಾಸಕರಾದ ಎಸ್.ಎ ರವೀಂದನಾಥ್, ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ ರಾಮಚಂದ್ರಪ್ಪ, ಮಾಜಿ ಶಾಸಕ ಬಿ.ಪಿ ಹರೀಶ್, ಭಾರತೀಯ ರೈತ ಒಕ್ಕೂಟದ ಡಾ.ಎಚ್. ನರಸಿಂಹಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಲ್ಲದೆ ದಾವಣಗೆರ ಸುತ್ತಮುತ್ತ ಹಳ್ಳಿಯಿಂದ ಸಾವಿರಾರು ಜನ ಭಾಗಿಯಾಗಿ ಬಾಗಿನ ಅರ್ಪಿಸಿದರು.

ಭದ್ರಾ ಅಚ್ಚುಕಟ್ಟು ಭಾಗದ ರೈತರ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸಕಾರದ ಮೇಲೆ ಒತ್ತಡ ಹಾಕಬೇಕಿದೆ. ಯೋಜನೆಗೆ ಹೆಚ್ಚಿನ ಅನುದಾನ ತರುವಲ್ಲಿ ಎಲ್ಲ ಶಾಸಕರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗವನ್ನು ಮುಖ್ಯಮಂತ್ರಿಗಳ ತಗೆದುಕೊಂಡು ಹೋಗಬೇಕಿದೆ ಎಂದ ಸಂಸದರು ತಿಳಿಸಿದರು.
ನೀರು ಅತ್ಯಮೂಲ್ಯವಾದ ವಸ್ತು. ಅದನ್ನು ಮಿತವಾಗಿ ಬಳಸಿ. ಮುಂದಿನ ರೈತರಿಗೂ ಅನುಕೂಲವಾಗುವಂತೆ ರೈತರು ಸಹಕರಿಸಬೇಕು. ಈ ಬಾರಿ ಜುಲೈ ಕಳೆದರು ಮಳೆ ಬಂದಿರಲಿಲ್ಲ. ಆದರೆ, ಅದೃಷ್ಟ ಎನ್ನುವಂತೆ ಒಂದೇ ವಾರದಲ್ಲಿ ಡ್ಯಾಮ್ ತುಂಬಿದೆ. ಈ ನೀರನ್ನು ಎಲ್ಲ ರೈತಲು ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಂಸದರು ಹೇಳಿದರು.
22 ಕೆರೆ ಗಳಿಗೆ ನೀರು ತುಂಬಿಸಲು ಯೋಜನೆಗೆ ಅಳವಡಿಸಿರುವ ಪೈಪ್ ಗಳು ಗುಣಮಟ್ಟದಿಂದ ಕೂಡಿಲ್ಲ. ನದಿಯಲ್ಲಿ ನೀರಿದ್ದರೂ ಕೆರೆಗಳಿಗೆ ನೀರ ತುಂಬಿಸಲು ಆಗುತ್ತಿಲ್ಲ. ಯೋಜನೆಗೆ ಅನುದಾನ ತರುವಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ನೀರಿದ್ದರೂ, ಜಗಳೂರು ಜನರು ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ. ಸಿರಿಗೆರೆ ಶ್ರೀ ಅನುಗ್ರಹದಿಂದ ತಾಲ್ಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 670 ಕೋಟಿ ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಗೆ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಗಳೂರು ಶಾಸಕ ಎಸ್.ಎ ರಾಮಚಂದ್ರಪ್ಪ ಹೇಳಿದರು.
ಇನ್ನು ಭಾರತೀಯ ರೈತ ಒಕ್ಕೂಟದ ಡಾ. ಎಚ್. ನರಸಿಂಹಪ್ಪ ಮಾತನಾಡಿ, ಭದ್ರಾ ನೆಎಲಗಳ ಮೇಲೆ ಅಕ್ರಮವಾಗಿ ಪಂಪ್‌ಸೆಟ್‌ಇಟ್ಟಿರುವುದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಹೇಳಿದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



