ಡಿವಿಜಿಸುದ್ದಿ.ಕಾಂ
ಬೆಂಗಳೂರು: ಕೃಷಿ ವಿಶ್ವ ವಿದ್ಯಾಲಯದ ಬೇಕರಿ ತರಬೇತಿ ಕೇಂದ್ರದಿಂದ ಬೇಕರಿ ತಂತ್ರಜ್ಞಾನ ತರಬೇತಿ ಅರ್ಜಿ ಆಹ್ವಾನಿಸಿದೆ. ಬೇಕರಿ ಉದ್ಯಮದಲ್ಲಿ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹದಿನಾಲ್ಕು ವಾರಗಳ ಬೇಕರಿ ಟೆಕ್ನಾಲಜಿ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಫೇಲ್ ಆದವರೂ ಅರ್ಜಿ ಸಲ್ಲಿಸಬಹುದು. ನಿಗಧಿತ ಅರ್ಜಿ ಫಾರಂಗೆ ರೂಪಾಯಿ ೧೦ ಕಟ್ಟಿ ಅರ್ಜಿ ಸಲ್ಲಿಸಬೇಕು. ಭರ್ತಿಮಾಡಿದ ಅರ್ಜಿಯನ್ನು ಕೂನೆಯ ದಿನಾಂಕ ೩೧.೦೮.೨೦೧೯ ರಂದು ೧೨.೦೦ ಘಂಟೆಯ ಒಳಗೆ ಸಲ್ಲಿಸಬೇಕು. ವಿಳಾಸ: ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-೫೬೦ ೦೨೪, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ೦೮೦-೨೩೫೧೩೩೭೦



