ಕಳೆದ 6 ವರ್ಷಗಳಲ್ಲಿ ನೀವು ಮಾಡಿದ ಸಾಧನೆ ಮೆಚ್ಚುವಂತಹದ್ದು, ನಿಮ್ಮ ಮಾತಿನ ಮೋಡಿಗೆ ದೇಶದ ಕೋಟ್ಯಂತರ ಜನರು ಮಾರು ಹೋಗಿದ್ದು ಸುಳ್ಳಲ್ಲ. ನಿಮ್ಮ ನಡೆ ನುಡಿ ಇತರರಿಗೂ ಮಾದರಿ, ಭವ್ಯ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗದಲ್ಲಿ ತಂದು ನಿಲ್ಲಿಸಿದ್ದ ಹುಬ್ಬೆರುಸುವಂತಹ ಕೆಲಸ. ಟಿಕ್ ಟಾಕೀನ ಶೋಕಿ ಮನುಷ್ಯರೆಂದು ಅನೇಕರು ಕುಟಿಕಿದ್ದರೂ ಸಹ ನಿಮ್ಮ ಗಾಂಭೀರ್ಯತೆ ಮೆಚ್ಚಲೇ ಬೇಕು ದೇಶ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಸಹ ಅದನ್ನು ತಹಬದಿಗೆ ತರಲು ನಿಮ್ಮ ತಂಡ ಮಾಡುತ್ತಿರುವ ಪ್ರಯತ್ನ ಸರಿ…
ಏಕ ಭಾರತ್ ಶ್ರೇಷ್ಠ ಭಾರತ್ ಎಂಬ ಘೋಷಣೆ ಮನ ಮುಟ್ಟುವಂತಿದೆ. ಆದರೆ ಮೋದಿಜಿ ಅವರಿಗೆ ನನ್ನದೊಂದು ಪ್ರಶ್ನೆ. ತಾವು ಬಿಹಾರದ ಪ್ರವಾಹಕ್ಕೆ ಸ್ಪಂದಿಸಿ ಟ್ವಿಟ್ ಮಾಡಿದ್ದೀರಿ… ಆದರೆ, ಉತ್ತರ ಕರ್ನಾಟಕಕ್ಕೆ ಪ್ರವಾಹ ಅಪ್ಪಳಿಸಿ 50 ಕ್ಕೂ ಹೆಚ್ಚು ದಿನಗಳಾಗಿವೆ. ಆದರೂ ಯಾಕೆ ಈ ಮೌನ…?
ಏಕ ಭಾರತ್ ಶ್ರೇಷ್ಠ ಭಾರತದಲ್ಲಿ ಉತ್ತರ ಕರ್ನಾಟಕ ಇಲ್ಲವೇ ಅಥವಾ ಯಡಿಯೂರಪ್ಪನವರ ಮೇಲಿನ ಸಿಟ್ಟಿಗೆ ಇಡೀ ಉತ್ತರ ಕರ್ನಾಟಕದ ಜನರ ಮೇಲೇಕೆ ಕೋಪ-ತಾಪ. 25 ಜನ ಸಂಸದರನ್ನು ಆಯ್ಕೆ ಮಾಡಿ ತಾವು 2 ನೇ ಬಾರಿ ಪ್ರಧಾನಿಯಾಗುವಂತೆ ಮಾಡಿದ್ದು ತಪ್ಪಾ..? ಉತ್ತರ ಕರ್ನಾಟಕದ ಜನರು ಮನೆ ಮಠ ಕಳೆದುಕೊಂಡರೂ ಯಾಕೀ ಮೌನ..?

ಹಣಕಾಸು ಮಂತ್ರಿ, ಗೃಹ ಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದಾಗ ನೆರೆ ಪರಿಣಾಮ ಕಾಣಿಸಲಿಲ್ಲವೇ ..? ನಿಮ್ಮ ಎಲ್ಲಾ ನಿರ್ಧಾರಗಳನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದು ತಪ್ಪಾ..? ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಯಡಿಯೂರಪ್ಪನವರ ಶ್ರಮ ಇಲ್ಲವೇ ..? ಅವರೊಬ್ಬರ ಮೇಲಿನ ಸಿಟ್ಟಿಗೆ ಉತ್ತರ ಕರ್ನಾಟಕದ ಮೇಲೆ ಬರೆ ಹಾಕುವುದು ಸರಿಯೇ..?
ನಾವು 25 ಜನ ಸಂಸದರನ್ನು ಗೆಲ್ಲಿಸಿದ್ದು ನಿಮ್ಮನ್ನು ನೋಡಿಯೇ ಹೊರತು ಅಭ್ಯರ್ಥಿಯನ್ನು ನೋಡಿಯಲ್ಲ. ಪೂರ್ತಿ ರಾಜ್ಯದಲ್ಲೀಗ ನಿಮ್ಮ ನಡೆ ಬಗ್ಗೆ ಕುದಿ ಮೌನವಿದೆ. ಅದು ಕಟ್ಟೆಯೊಡೆಯುವ ಮುನ್ನ ಮಾತನಾಡಿ ಉತ್ತರ ಕರ್ನಾಟಕದ ಜನರ ನೆರವಿಗೆ ಸ್ಪಂದಿಸಿ ಇಲ್ಲವೇ ಉತ್ತರ ಕರ್ನಾಟಕ ಜನರಿಗೆ ವಿಷ ಕೊಟ್ಟು ಬಿಡಿ… ಮಾತನಾಡಿ ಮೋದಿಜಿ..

ಕರಿಬಸಪ್ಪ ಬಿ.ಆರ್. (ಕೆಬಿ) ಹರಿಹರ, ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ 8970651265



