ಡಿವಿಜಿ ಸುದ್ದಿ, ದಾವಣಗೆರೆ: 2020-21 ಮತ್ತು 22-23ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಅವಧಿಗೆ ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪ್ರಮುಖ ತೋಟಗಾರಿಕೆ ಬೆಳೆ ವಿಮೆ ಪಾವತಿಸಲು ಜೂನ್ 30 ಕೊನೆಯ ದಿನವಾಗಿದೆ.
ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ, ವಿಳ್ಯದೆಲೆ, ಕಾಳುಮೆಣಸು ಬೆಳೆಗಳಿಗೆ ವಿಮೆಯನ್ನು ಪಾವತಿಸಲು ಜೂ 30 ಕೊನೆಯ ದಿನವಾಗಿದೆ. ಮಾವು ಬೆಳೆಗೆ ಜೂ. 31 ಕೊನೆಯ ದಿನ. ರೈತರು ವಿಮಾ ಬೆಳೆಗಳಿಗೆ ಮೊತ್ತವನ್ನು ತಮ್ಮ ಬ್ಯಾಂಕ್, ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಾವತಿಸಬಹುದು ಎಂದು ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.



