ಡಿವಿಜಿ ಸುದ್ದಿ.ಕಾಂ,ಚನ್ನಗಿರಿ: ಜೀವನ ಕೇವಲ ಸಾಹಿತ್ಯದ ಪ್ರತಿಬಿಂಬ ಮಾತ್ರವಲ್ಲ, ಅದೊಂದು ಗತಿಬಿಂಬ. ಸಾಹಿತಿ ತನ್ನ ಸುತ್ತಲಿನ ಸಮಾಜದ ಆಗುಹೋಗುಗಳಿಗೆ ಸೂಕ್ತವಾಗಿ ಸ್ಪಂದಿಸುವ ಸಮಾಜಮುಖಿ ಮನೋಭಾವ ಹೊಂದಿದ್ದಾರೆ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮರ್ಗನಳ್ಳಿ ಪ್ರಕಾಶ್ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲ್ಲೂಕಿನ ಬಸವಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿ ಸಮಾಜಮುಖಿಯಾಗಿದ್ದಾಗ ಮಾತ್ರ ಅತ್ಯುತ್ತಮ ಸಾಹಿತ್ಯ ರಚಿಸಲು ಸಾಧ್ಯ. ಓದುಗರು ಅದನ್ನು ಧನಾತ್ಮಕವಾಗಿ ಸ್ವೀಕರಿಸಿದಾಗ ಮಾತ್ರ ಆದರ್ಶನ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.

ಏರ್ಪಡಿಸಲಾಗಿತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕುಮಾರ ಎನ್ ರವರು ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕವಿಯು ಸಮಾಜದಲ್ಲಿನ ವ್ಯವಸ್ಥೆಗೆ ಹೊಸ ಬಗೆಯ ಚಿಕಿತ್ಸೆಯನ್ನು ನೀಡುವ ಚಿಕಿತ್ಸಕ ಮನೋಭಾವವನ್ನು ಬೆಳೆಸಿಕೊಂಡಾಗ ಸಾಹಿತ್ಯವೂ ಸಹ ದಿವ್ಯ ಔಷಧಿ ಆಗಬಲ್ಲದು ಎಂದು ಕರೆ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಲ್ಲಯ್ಯ ಎನ್. ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ಕೇಂದ್ರಿಕರಿಸಲು ಸಾಹಿತ್ಯ, ಕಾವ್ಯ ರಚನೆ ಸಹಕಾರಿಯಾಗಲಿದೆ. ಈ ಮೂಲಕ ವಿದ್ಯಾರ್ಥಿ ವ್ಯಕ್ತಿತ್ವ ವಿಕಾಸನಕ್ಕೆ ನೆರೆವಾಗಲಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ರವಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು.




ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು