ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 11,458 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ದೇಶದಲ್ಲಿ ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಪ್ರಕರಣಗಳವಾಗಿದೆ.
ದೇಶದಲ್ಲಿ ಇದುವರೆಗೆ 3,08,993 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1,54,330 ಗುಣಮುಖರಾಗಿದ್ದಾರೆ. 1,45,779 ಪ್ರಕರಣಗಳು ಸಕ್ರಿಯವಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕಣಗಳಿಗಿಂತಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.
ಇನ್ನು 24 ಗಂಟೆ ಅವಧಿಯಲ್ಲಿ ದೇಶದಲ್ಲಿ 386 ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 1 ಲಕ್ಷದ ಗಡಿ ದಾಟಿದೆ. ತಮಿಳುನಾಡಿನಲ್ಲಿ 40,698 ಪ್ರಕರಣಗಳು, ದೆಹಲಿಯಲ್ಲಿ 36,824, ಗುಜರಾತ್‌ನಲ್ಲಿ 22,527 ಪ್ರಕರಣಗಳಿವೆ.
ಈ ಮಧ್ಯೆ, ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ವೇಗವಾಗಿ ಮೇಲೇರುತ್ತಿದೆ. 15 ದಿನಗಳ ಹಿಂದೆ ಹತ್ತನೇ ಸ್ಥಾನದಲ್ಲಿದ್ದ ಭಾರತ ಸದ್ಯ 4ನೇ ಸ್ಥಾನದಲ್ಲಿದೆ.



