ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀಮಾನ್ ನರೇಂದ್ರ ಮೋದಿ ಅವರ ಜನ್ಮ ಕುಂಡಲಿ.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಶ್ರೀ ನರೇಂದ್ರ ಮೋದಿ ಹುಟ್ಟಿರುವ ದಿನಾಂಕ17_09_1950
ಹುಟ್ಟಿದ ಸಮಯ11:00 ಬೆಳಗ್ಗೆ.
ಲಗ್ನ_ ವೃಶ್ಚಿಕ, ಲಗ್ನಾಧಿಪತಿ_ ಕುಜ
ಜನ್ಮನಕ್ಷತ್ರ_ ಅನೂರಾಧಾ 2ನೇ ಪಾದ
ನಕ್ಷತ್ರ ಅಧಿಪತಿ _ಶನಿ
ಜನ್ಮರಾಶಿ_ ವೃಶ್ಚಿಕ
ಜನ್ಮರಾಶಿ ಅಧಿಪತಿ_ ಮಂಗಳ
ದೇವ_ಗಣ
ಜನ್ಮ ವಾರ _ರವಿವಾರ
ಇವರದು ಲಗ್ನ ವೃಶ್ಚಿಕ ಆಗಿದ್ದು ಅಲ್ಲಿ ಚಂದ್ರ, ಮಂಗಳ ಇರುವರು. ಕುಂಭ ರಾಶಿಯಲ್ಲಿ ಗುರು, ಸಿಂಹ ರಾಶಿಯಲ್ಲಿ ಶನಿ ಮತ್ತು ಶುಕ್ರ. ಕನ್ಯಾ ರಾಶಿಯಲ್ಲಿ ರವಿ, ಬುಧ ಮತ್ತು ಕೇತು ಇರುವರು. ಮೀನ ರಾಶಿಯಲ್ಲಿ ರಾಹುವಿರುತ್ತಾನೆ.
ಇಲ್ಲಿ ನಮಗೆ ಗೋಚರವಾಗುವ ಯೋಗಗಳು ಪರಸ್ಪರ ಕೇಂದ್ರದಲ್ಲಿ ಚಂದ್ರ ,ಗುರು ಇದರಿಂದ “ಅಖಂಡ ಸಾಮ್ರಾಜ್ಯ ಯೋಗ”ಪ್ರಾಪ್ತಿ. ಗುರು ಶನಿ ಪರಿಸರ ದೃಷ್ಟಿಯಿಂದ “ಸನ್ಯಾಸಯೋಗ” ಪ್ರಾಪ್ತಿ.
ಲಗ್ನದಲ್ಲಿ ಚಂದ್ರ ಮತ್ತು ಮಂಗಳ ಇದರಿಂದ ಶಶಿಮಂಗಳ ಯೋಗ ಪ್ರಾಪ್ತಿ. ರುಚಕ ಮಹಾಯೋಗ ಪ್ರಾಪ್ತಿ ಮತ್ತು ನೀಚಭಂಗ ರಾಜಯೋಗ ಪ್ರಾಪ್ತಿ ಲಭಿಸುವುದು.
ಇವರ ಜನ್ಮಕುಂಡಲಿಯಲ್ಲಿ ಉಚ್ಚರಾಶಿಯ ಬುಧನಿಂದ ಮಹಾ ಬುದ್ಧಿ ಯೋಗವಿದೆ.
ದಶಮ ಸ್ಥಾನವಾದ ಸಿಂಹ ರಾಶಿಯಲ್ಲಿ ಶನಿ ಶುಕ್ರರು ಫಲದಂತೆ “ಕುಲದೀಪಕ ಯೋಗ” ಪ್ರಾಪ್ತಿ.
ಇವರಿಗೆ ಸಾಡೇಸಾತಿ ಶನಿ ಫಲ ಕೂಡ ಇತ್ತು.26_10_2020 ಸಾಡೇಸಾತಿ ಶನಿ ಇದೆ. ಶನಿ ಸ್ವಾಮಿ ಕೂಡ ಅಭಯ ಹಸ್ತ ನೀಡುವನು. ಸಿಂಹ ರಾಶಿಯಲ್ಲಿರುವ ಶನಿ ತನ್ನ ಕ್ಷೇತ್ರ ಕುಂಭ ರಾಶಿಯನ್ನು ನೋಡುವನು. ಅಖಂಡ ಸಾಮ್ರಾಜ್ಯ ಯೋಗ ಕ್ಕೆ ಕಾರಣನಾದ ಗುರು ದಶಮ ಸ್ಥಾನ ಸಿಂಹ ರಾಶಿ ನೋಡುವನು. ಹಾಗಾಗಿ ಶನಿ ಸ್ವಾಮಿಯು “ಭಾಗ್ಯವಿಧಾತ”. ಶನಿ ಎಂದರೆ ಜನ ಸಂಪತ್ತು, ಜನ ಸಂಪತ್ತು ಎಂದರೆ ಶನಿ. ದೇಶದಲ್ಲಿರುವ ಭಾರತೀಯ ಪ್ರಜೆಗಳ 130 ಕೋಟಿ ಜನರ ಮನಸ್ಸನ್ನು ವಶೀಕರಣ ಮಾಡುವನು. ಹೀಗಾಗಿ ಮೋದಿಜಿಯವರು ದೇಶದ ಪ್ರಧಾನಮಂತ್ರಿ ಎರಡನೇ ಬಾರಿ ಸ್ವೀಕರಿಸಿದರು.