ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಲಾಕ್ ಡೌನ್ ನಿಂದ ಕಳೆದ ಎರಡೂವರೆ ತಿಂಗಳಿಂದ ಕ್ಲೋಸ್ ಆಗಿದ್ದ, ದೇವಸ್ಥಾನ, ಮಾಲ್ ಓಪನ್ ಆಗಲಿವೆ.
ಮಾರ್ಚ್ 23ರಿಂದ ಲಾಕ್‌ಡೌನ್ ಆಗಿದ್ದ ಹೋಟೆಲ್‌ಗಳಲ್ಲಿ ಇದುವರೆಗೆ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ನಾಳೆಯಿಂದ ನಗರದ ಎಲ್ಲ ಕಡೆ ಹೋಟಲ್ , ಮಾಲ್ ಗಳು ಓಪನ್ ಇರಲಿವೆ.
ನಗರದಲ್ಲಿ ಒಟ್ಟು 167 ನೋಂದಾಯಿತ ಹಾಗೂ ಸಣ್ಣಪುಟ್ಟ ಹೋಟೆಲ್‌ಗಳು ಸೇರಿ 440 ಹೋಟೆಲ್ ಗಳಿವೆ. ಈ ಎಲ್ಲಾ ಹೋಟೆಲ್ ಗಳು ಗ್ರಾಹಕರಿಗೆ ಮತ್ತೆ ಸವಿರುಚಿ ನೀಡಲು ಸಿದ್ಧತೆ ಮಾಡಿಕೊಂಡಿವೆ. ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ , ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಇನ್ನು ನಗರದೇವತೆ ದುರ್ಗಾಂಬಿಕಾ ದೇವಾಲಯ ಸೇರಿ ಹಲವು ದೇವಾಲಯಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಲಾಯಿತು. ಇನ್ನು ಮಸೀದಿ ಹಾಗೂ ಚರ್ಚ್‌ಗಳನ್ನು ಕೂಡ ನಾಳೆಯಿಂದ ಓಪನ್ ಮಾಡಲು ನಿದ್ಧತೆ ನಡೆಸುತ್ತಿದ್ದಾರೆ.