ಡಿವಿಜಿ ಸುದ್ದಿ, ದಾವಣಗೆರೆ: ಕೆಪಿಟಿಸಿಎಲ್ 66 ಕೆ.ವಿ. ದಾವಣಗೆರೆ-ಚಿತ್ರದುರ್ಗ ಮಾರ್ಗದ ಮರು ಜೋಡಣೆ ಕಾರ್ಯದ ಕಾಮಗಾರಿ ನಿರ್ವಹಿಸುವುದರಿಂದ ಆವರಗೆರೆ ಮತ್ತು ಕಾಡಜ್ಜಿ ಉಪಕೇಂದ್ರಗಳಿಗೆ ಸೇರಿರುವ ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ. ನಾಳೆ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದಾವಣಗೆರೆ ತಾಲ್ಲೂಕಿನ ಅತ್ತಿಗೆರೆ, ಆನಗೋಡು, ಮಾಯಕೊಂಡ ಹಾಗೂ ಹೊಳಲ್ಕರೆ ತಾಲ್ಲೂಕಿನ ಸಾಸಲಹಳ್ಳ, ಚಿಕ್ಕಜಾಜೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.