ಡಿವಿಜಿ ಸುದ್ದಿ, ಹರಿಹರ : ದಾವಣಗೆರೆ ಮಹಾನಗರ ಪಾಲಿಕೆಗೆ ನೀರು ಸರಬರಾಜು ಮಾಡುತ್ತಿರುವ ರಾಜನಹಳ್ಳಿ ಪಂಪ ಹೌಸ್ ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಬ್ಯಾರೇಜ್ ಕಾಮಗಾರಿಯನ್ನು ಪಾಲಿಕೆ ವಿಪಕ್ಷ ಸದಸ್ಯರುಗಳು ಭೇಟಿ ಪರಿಶೀಲಿಸಿದರು.
ಜಲ ಸಿರಿ ಯೋಜನೆಯ 24 ತಾಸು ಕುಡಿಯುವ ನೀರಿಗಾಗಿ ನಿರ್ಮಾಣವಾಗುತ್ತಿರುವ ಬ್ಯಾರೇಜ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾರೇಜ್ ಕಾಮಗಾರಿಗೆ 76 ಕೋಟಿ 11 ಲಕ್ಷದ ಯೋಜನೆ ಇದಾಗಿದ್ದು, 2 ವರ್ಷದ ಕಾಲಮಿತಿ ಒಳಗಡೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಕಳೆದ ಐದಾರು ದಿನಗಳಿಂದ ನೀರಿನ ಮಟ್ಟ ಇಳಿಮುಖವಾಗಿದ್ದು ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದ್ದು ಶೀಘ್ರದಲ್ಲಿ ಹೊಡ್ಡು ಹಾಕಿ ನೀರನ್ನು ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಂಪ ಹೌಸ್ ನಲ್ಲಿ ಒಂದು ಸಾವಿರ ಎಚ್ ಪಿ ಎರಡು ಮೋಟರ್ ಗಳು, ಐದುನೂರು ಎಚ್ ಪಿ ಮೂರು ಮೋಟರ್ ಗಳಿದ್ದು, ಸಾವಿರ ಎಚ್ ಪಿ ಒಂದು ಮೋಟಾರ್ ಮಾತ್ರ ಚಾಲ್ತಿ ಇರುತ್ತದೆ. ಇನ್ನೊಂದು ರಿಪೇರಿ ಗೆ ಬಂದಿದ್ದು ಅಧಿಕಾರಿಗಳು ಕೂಡಲೇ ಸರಿ ಮಾಡಿಸಬೇಕು ಎಂದು ಸೂಚಿಸುದರು.

ಹೊಡ್ಡು ಹಾಕಿ ನೀರು ನಿಲ್ಲಿಸಿದರೆ ಮಾತ್ರ ಐದುನೂರು ಎಚ್ ಪಿ ಮೂರು ಮೋಟರ್ ಗಳು ಪ್ರಾರಂಭಿಸಲು ಸಾಧ್ಯ. ಆಗ ನಗರಕ್ಕೆ ಸುಸಜ್ಜಿತವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಏ ನಾಗರಾಜ್ ಸದಸ್ಯರುಗಳಾದ ಗಡಿ ಮಂಜುನಾಥ್, ಅಬ್ದುಲ್ ಲತೀಫ್, ಪಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಕಲ್ಲಳ್ಳಿ ನಾಗರಾಜ್ ಪಕ್ಷದ ಮುಖಂಡರುಗಳಾದ ಇಟ್ಟಿಗುಡಿ ಮಂಜುನಾಥ್, ಉಮೇಶ್ , ಹುಲ್ಮನಿ ಗಣೇಶ್, ಶಫಿ ಪಂಡಿತ್, ಕೆ. ಎಲ್.ಹರೀಶ್ ಉಪಸ್ಥಿತರಿದ್ದರು.



