ಪ್ರಮುಖ ಸುದ್ದಿ
ದಿನ ಭವಿಷ್ಯ
ಶುಭ ಭಾನುವಾರ-ಮೇ-24,2020 ರಾಶಿ ಭವಿಷ್ಯ
ಸೂರ್ಯೋದಯ: 05:56, ಸೂರ್ಯಾಸ್: 18:36
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಬಿದಿಗೆ – 25:00+ ವರೆಗೆ
ನಕ್ಷತ್ರ: ಮಾರ್ಗಶಿರ – ಪೂರ್ಣ ರಾತ್ರಿ ವರೆಗೆ
ಯೋಗ: ಸುಕರ್ಮ – 06:25 ವರೆಗೆ ಬಿಟ್ಟುಹೋದ ಯೋಗ : ಧೃತಿ – 29:55+ ವರೆಗೆ
ಕರಣ: ಬಾಲವ – 12:41 ವರೆಗೆ ಕೌಲವ – 25:00+ ವರೆಗೆ
ದುರ್ಮುಹೂರ್ತ: 16:55 – 17:46
ರಾಹು ಕಾಲ: 17:01 – 18:36
ಯಮಗಂಡ: 12:16 – 13:51
ಗುಳಿಕ ಕಾಲ: 15:26 – 17:01
ಅಮೃತಕಾಲ: 20:53 – 22:34
ಅಭಿಜಿತ್ ಮುಹುರ್ತ: 11:51 – 12:41
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ
ಕುಟುಂಬದ ಜೊತೆ ಸಂತೋಷ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭ . ನಿಮ್ಮ ಲೇವಾದೇವಿ ಸರಳವಾಗಿ ನಡೆಯುವುದು .ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಹೊರಗೆ ಹೋಗಲು ಯೋಚಿಸಬಹುದು ನಿಮ್ಮ ಸಂಗಾತಿಯ ಮನಸ್ಥಿತಿ ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಕೆಲಸದಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ನಿಮ್ಮದಾಗಲಿದೆ. ಕೆಲವು ದಿನಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೀರಿ. ಕಚೇರಿಯಲ್ಲಿರುವ ನಿಮ್ಮ ಹಿರಿಯರು ನಿಮ್ಮೊಂದಿಗೆ ಬೆಂಬಲ ನೀಡುವರು. ನೀವು ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಬೇಕು.
ಅದೃಷ್ಟ ಬಣ್ಣ: ನೀಲಿ ಆಕಾಶ
ಅದೃಷ್ಟ ಸಂಖ್ಯೆ: 6,8
ಅದೃಷ್ಟ ಸಮಯ: ಸಂಜೆ 4:00 ರಿಂದ 12:10 ರವರೆಗೆ
ವೃಷಭ ರಾಶಿ
ಉದ್ಯಮ ಮತ್ತು ನಿಮ್ಮ ವ್ಯವಹಾರವನ್ನು ಬೆಳೆಸಲು ಬಯಸಿದರೆ ಇದು ಉತ್ತಮ ಸಮಯ. ವ್ಯಾಪಾರದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದರೆ ಹಣಕಾಸಿನಲ್ಲಿ ಜಾಗೃತಿ ಇರಲಿ. ಇಂದು ಉದ್ಯೋಗಿಗಳಿಗೆ ಮನಸ್ತಾಪದ ದಿನ. ಇಂದು ಕುಟುಂಬದಲ್ಲಿ ಸ್ವಲ್ಪ ಒತ್ತಡ ಇರುತ್ತದೆ. ನಿಮ್ಮ ಪ್ರೀತಿ, ಸ್ನೇಹಿತರ ಸಂಬಂಧ ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರಿ ಮತ್ತು ಎಲ್ಲರ ಜತೆ ಸೌಜನ್ಯದಿಂದ ವರ್ತಿಸಿ. ನಿಮ್ಮ ಸಂಗಾತಿಯ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಈ ಎಲ್ಲಾ ತೊಡಕುಗಳಲ್ಲಿ ನೀವು ಎಲ್ಲೋ ನಿಮ್ಮ ವೈವಾಹಿಕ ಜೀವನವನ್ನು ನಿರ್ಲಕ್ಷಿಸುತ್ತಿದ್ದೀರಿ. ನಿಮ್ಮ ಹಣಕಾಸು ಉತ್ತಮವಾಗಿರುತ್ತದೆ. ನಿಮ್ಮ ನಿಗದಿತ ಹಣಕಾಸಿನಲ್ಲಿ ವ್ಯವಹಾರ ಆಗಲಿದೆ. ಆತುರದ ನಿರ್ಧಾರ ಬೇಡ.
ಅದೃಷ್ಟ ಬಣ್ಣ: ಮರೂನ್
ಅದೃಷ್ಟ ಸಂಖ್ಯೆ: 8,9
ಅದೃಷ್ಟ ಸಮಯ: ಬೆಳಿಗ್ಗೆ 9:40 ರಿಂದ ಮಧ್ಯಾಹ್ನ ,4:45 ರವರೆಗೆ
ಮಿಥುನ ರಾಶಿ
ಇಂದು ಪತ್ನಿಯ ಸಹಾಯ ಸಿಗಲಿದೆ. ಹಳೆ ನಿವೇಶನ ಆಧುನಿಕರಣದ ಚಿಂತನೆ.
ಯಶಸ್ಸನ್ನು ಸಾಧಿಸಲು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹಂತಹಂತವಾಗಿ ಮುಂದುವರಿಯುವುದು ಉತ್ತಮ. ನೀವು ಇಂದು ಕೆಲಸ ಮಾಡಿದರೆ ಮೇಲಧಿಕಾರಿಯಿಂದ ಪ್ರಶಂಸೆ ಸಿಗಲಿದೆ. ನೀವು ಏಕಾಂಗಿಯಾಗಿ ಹೋರಾಟ. ನಿಮ್ಮ ಸಹೋದ್ಯೋಗಿಗಳೊಂದಿಗೆ ವಿಶ್ವಾಸ ಕಾಯ್ದುಕೊಳ್ಳುವುದು ಉತ್ತಮ. ಪ್ರೀತಿಯ ವಿಷಯದಲ್ಲಿ ನಿರಾಶೆ ಬರಬಹುದು. ನೀವು ಧೈರ್ಯವನ್ನು ಕಳೆದುಕೊಳ್ಳದೆ ಮುಂದೆ ಹೆಜ್ಜೆ ಇಡಬೇಕು. ನಿಮ್ಮ ಆರ್ಥಿಕ ಸ್ಥಿತಿ ಮಧ್ಯಮ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 2,9
ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 7:00 ರವರೆಗೆ
ಕರ್ಕ ರಾಶಿ
ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನೀವು ಪೂರ್ಣ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುತ್ತೀರಿ. ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಯಾವುದೇ ಗೌಪ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಇಂದು ನಿಮ್ಮ ಹೆತ್ತವರ ಬೆಂಬಲದೊಂದಿಗೆ ವಿಶೇಷವಾದ ಔತಣಕೂಟ ನೆರವೇರಲಿದೆ. ನಿಮ್ಮ ಸಂಗಾತಿ ಅವರಿಗೆ ವಿಶೇಷ ಉಡುಗೊರೆಯನ್ನು ಖರೀದಿಸಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ. ನೀವು ಭಾವನಾತ್ಮಕವಾಗಿ ಮನಸ್ಸಿನಲ್ಲಿ ವಿಚಾರಗಳು ಮೂಡಲಿದೆ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 1,5
ಅದೃಷ್ಟ ಸಮಯ: ಬೆಳಿಗ್ಗೆ 10:25 ರಿಂದ ಮಧ್ಯಾಹ್ನ 3:00 ರವರೆಗೆ
ಸಿಂಹ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮುಂದುವರಿಸಿದರೆ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಕಾಡಲಿದೆ. ಜಾಗರೂಕರಾಗಿರುವುದು ಉತ್ತಮ. ಆದ್ದರಿಂದ ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕವಾಗಿ ನೀವು ಇಂದು ತುಂಬಾ ಅದೃಷ್ಟಶಾಲಿಯಾಗುತ್ತೀರಿ. ಹಣಕ್ಕಾಗಿ ಯಾವುದೇ ಉತ್ತಮ ಅವಕಾಶವನ್ನು ಪಡೆಯಬಹುದು ಮತ್ತು ಈ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ನೀವು ಇಂದು ಕೆಲವು ಅಪಾಯಗಳನ್ನು ಎದುರಿಸುವ ಪ್ರಸಂಗ ಸಂಭವ. ಕೆಲಸದ ಬಗ್ಗೆ ಮಾತನಾಡುತ್ತಾ, ನೀವು ಯಶಸ್ಸನ್ನು ಸವಿಯಲು ಬಯಸಿದರೆ ಹೆಚ್ಚು ಶ್ರಮಿಸಬೇಕು. ಕಳೆದ ಕೆಲವು ದಿನಗಳಿಂದ ಮನಸ್ಸಿನಲ್ಲಿ ರೀತಿಯ ವೇದನೆ. ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿರಿಸಿಕೊಳ್ಳಬೇಕು. ಕುಟುಂಬ ಜೀವನ ಏರು-ಪೇರು.
ಅದೃಷ್ಟ ಬಣ್ಣ: ಕ್ರೀಮ್
ಅದೃಷ್ಟ ಸಂಖ್ಯೆ: 2,4
ಅದೃಷ್ಟ ಸಮಯ: ಬೆಳಿಗ್ಗೆ 3:30 ರಿಂದ ಮಧ್ಯಾಹ್ನ 4:30 ರವರೆಗೆ
ಕನ್ಯಾ ರಾಶಿ
ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಹಠಾತ್ ಸಮಸ್ಯೆ ಸೃಷ್ಟಿಯಾಗಲಿವೆ. ಸಂಗಾತಿಯ ವರ್ತನೆ ನಿಮಗೆ ಮನಸ್ತಾಪ ವಾಗಲಿದೆ. ನೀವು ತಾಳ್ಮೆಯಿಂದಿರಬೇಕು. ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ಬೆಳೆಯಲು ಬಿಡಬೇಡಿ. ನಿಮ್ಮ ಕಚೇರಿಯಲ್ಲಿ ಸಮಸ್ಯೆ ಇದ್ದರೆ, ನಿರಾಶೆಗೊಳ್ಳುವ ಬದಲು, ನೀವು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಹೂಡಿಕೆ ಸದ್ಯಕ್ಕೆ ಬೇಡ. ನಿಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ನಿಮ್ಮ ಪ್ರಣಯ ಜೀವನದಲ್ಲಿ ಆನಂದ ಅನುಭವಿಸುವಿರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 2,8
ಅದೃಷ್ಟ ಸಮಯ: ಸಂಜೆ 500 ರಿಂದ 8:00 ರವರೆಗೆ
ತುಲಾ ರಾಶಿ
ನವದಂಪತಿಗಳಿಗೆ ಸಂತಾನದ ಚಿಂತನೆ. ಮಾತಾಪಿತೃ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿರಿ.
ಕುಟುಂಬದಲ್ಲಿ ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ಇಂದು ನೀವು ಕುಟುಂಬದಲ್ಲಿರುವ ಭಿನ್ನಾಭಿಪ್ರಾಯಗಳು ಪರಿಹರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ. ನಿಮ್ಮ ಸಂಗಾತಿಯ ಸಂಬಂಧದಲ್ಲಿ ನೀವು ಕಹಿ ಅನುಭವಿಸುತ್ತೀರಿ. ಕೆಲಸದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮವು ಲಾಭದಾಯಕವಾಗಲಿದೆ. ಇಂದು ನೀವು ಯಾವುದೇ ಹಣಕಾಸಿನ ವ್ಯವಹಾರ ಸುಗಮವಾಗಲಿದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 3,5
ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 6:00 ರವರೆಗೆ
ವೃಶ್ಚಿಕ ರಾಶಿ
ನಿಮ್ಮ ಮಕ್ಕಳ ಮದುವೆ ಚಿಂತನೆ. ಮಗನ ನಡುವಳಿಕೆ ತುಂಬಾ ಬೇಸರ.
ಇಂದು ನಿಮ್ಮ ಆರೋಗ್ಯಕ್ಕೆ ಜಾಗೃತಿ ವಹಿಸಿ. ಇಂದು ನಿಮ್ಮ ಕುಟುಂಬದ ಜೊತೆ ಸುಖ ಭೋಜನ ಅನುಭವಿಸುವಿರಿ. ಇಂದು ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶವಾಗಲಿದೆ. ಭವಿಷ್ಯದಲ್ಲಿ ನಿಮ್ಮ ಯಶಸ್ಸಿಗೆ ಪ್ರಮುಖವಾದಂಥ ಸಲಹೆಯನ್ನು ಸ್ನೇಹಿತರಿಂದ ಪಡೆಯುತ್ತೀರಿ. ನೀವು ವಿದ್ಯಾರ್ಥಿಯಾಗಿದ್ದರೆ, ಉತ್ತಮ ಫಲಿತಾಂಶಗಳಿಗಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ನಿಮ್ಮ ಅಮೂಲ್ಯ ಸಮಯದಲ್ಲಿ ಅನಗತ್ಯವಾಗಿ ಯೋಚಿಸಬೇಡಿ. ಇಂದು ಬಾಕಿ ಹಣವನ್ನು ಪಡೆಯುವ ಸಾಧ್ಯತೆ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 1,3, 5
ಅದೃಷ್ಟ ಸಮಯ: ಸಂಜೆ 5:10 ರಿಂದ ರಾತ್ರಿ 10:30
ಧನು ರಾಶಿ
ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗಲಿದೆ. ನಿಮ್ಮ ಸಂಗಾತಿಯು ಸಹನೆಯನ್ನು ತೋರಿಸುತ್ತಾರೆ. ಇಂದು ಇದ್ದಕ್ಕಿದ್ದಂತೆ ನೀವು ಎದುರಿಸಲು ತುಂಬಾ ಕಷ್ಟವೆನಿಸುವಂತಹ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುತ್ತದೆ. ನೀವು ವ್ಯಾಪಾರ ಮಾಡಿದರೆ ಮತ್ತು ನೀವು ಹೊಸ ಯೋಜನೆಯನ್ನು ಮಾಡಿದರೆ ಇದು ಸರಿಯಾದ ಸಮಯ. ಆರೋಗ್ಯದ ಮಧ್ಯಮ .ಇಂದು ಕಿರಿಕಿರಿ ಅನುಭವಿಸುವಿರಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 37
ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00 ರವರೆಗೆ
ಮಕರ ರಾಶಿ
ಈ ಸದ್ಯಕ್ಕೆ ಯಾವುದೇ ಉದ್ಯಮ ಪ್ರಾರಂಭ ಬೇಡ. ಶೀಘ್ರದಲ್ಲೇ ಉತ್ತಮ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ನಿಮ್ಮ ಸ್ವಂತ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಇಂದು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಲೇವಾದೇವಿ ಸಂಬಂಧಿಸಿದ ವಿಷಯಗಳು ಉತ್ತಮ. ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಿ. ವೈಯಕ್ತಿಕ ಜೀವನವು ಆನಂದಮಯವಾಗಿರುತ್ತದೆ. ಕುಟುಂಬ ಸಂಗಾತಿಯೊಂದಿಗಿನ ಸಂಬಂಧವು ಸಿಹಿಯಾಗಿರುತ್ತದೆ. ಇಂದು ನೀವು ಆರೋಗ್ಯವಾಗಿರುತ್ತೀರಿ ಮತ್ತು ಉಲ್ಲಾಸಗೊಳ್ಳುತ್ತೀರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 2,6
ಅದೃಷ್ಟ ಸಮಯ: ಬೆಳಿಗ್ಗೆ 12:00 ರಿಂದ ಮಧ್ಯಾಹ್ನ 2:00
ಕುಂಭ ರಾಶಿ
ಇಂದು ನಿಮ್ಮ ಕೆಲವು ಯೋಜನೆಗಳು ಪ್ರಾರಂಭಿಸುವಾಗ ಆತಂಕಗಳು ಅಡ್ಡಿಯಾಗಬಹುದು. ದೈಹಿಕವಾಗಿ ಮತ್ತು ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಕೆಲಸದಲ್ಲಿ, ದಿನವು ತುಂಬಾ ದಣಿದೂರುತ್ತೀರಿ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಕೆಲಸ ಹೆಚ್ಚು ಇರುತ್ತದೆ ಮತ್ತು ಸಮಯದ ಕೊರತೆಯಿಂದ ನೀವು ತುಂಬಾ ಅಸಮಾಧಾನಗೊಳ್ಳುತ್ತೀರಿ. ಎಲ್ಲವನ್ನೂ ನಿಭಾಯಿಸುವುದು ನಿಮಗೆ ಸ್ವಲ್ಪ ಕಷ್ಟವಾಗುತ್ತದೆ. ಇಂದು ಮನೆಯ ವಾತಾವರಣ ಸ್ವಲ್ಪ ಕೆಟ್ಟದಾಗಿರುತ್ತದೆ. ಕುಟುಂಬದ ಜೊತೆ ಸಮಾಧಾನದಿಂದ ವರ್ತನೆ ಮಾಡಿರಿ. ನಿಮ್ಮ ಹಿರಿಯರೊಂದಿಗೆ ಮಾತನಾಡುವಾಗ ಗೌರವ ಕಾಪಾಡಿ ಕೊಳ್ಳಿ. ಹಣದ ವಿಷಯದಲ್ಲಿ ಕೊಂಚ ನೆಮ್ಮದಿ ಪ್ರಾಪ್ತಿ.
ಅದೃಷ್ಟ ಬಣ್ಣ: ಪುಷ್ಪರಾಗ
ಅದೃಷ್ಟ ಸಂಖ್ಯೆ: 7,9
ಅದೃಷ್ಟ ಸಮಯ: ಸಂಜೆ 8 ರಿಂದ 10 ರವರೆಗೆ
ಮೀನ ರಾಶಿ
ನಿಮಗೆ ನೀಡಲಾಗಿರುವ ಯಾವುದೇ ಜವಾಬ್ದಾರಿಯನ್ನು ನೀವು ನಿರ್ವಹಿಸುವಿರಿ. ಉದ್ಯಮಿಗಳು ಸಹ ಇಂದು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆಯಿದೆ. ಕೆಲವು ಪ್ರಮುಖ ಮನೆಯ ಕಾರ್ಯಗಳನ್ನು ಎದುರಿಸಬೇಕಾಗಬಹುದು. ಆದರೂ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ .ನೀವು ಯಾವುದನ್ನೂ ಪಡೆಯುವುದಿಲ್ಲ. ನಿಮ್ಮ ವೈವಾಹಿಕ ಜೀವನವು ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಪ್ರಣಯ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆರ್ಥಿಕ ರಂಗದಲ್ಲಿ ದಿನವು ಲಾಭದಾಯಕವಾಗಿರುತ್ತದೆ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 5,8
ಅದೃಷ್ಟ ಸಮಯ: ಬೆಳಿಗ್ಗೆ 06:30 ರಿಂದ ಸಂಜೆ 05:00 ರವರೆಗೆ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
