ಡಿವಿಜಿ ಸುದ್ದಿ, ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರವರ ವತಿಯಿಂದ ಜಿಲ್ಲೆಯ ವಾದ್ಯವೃಂದ ಕಲಾವಿದರಿಗೆ ಪಕ್ಷದ ಕಚೇರಿಯಲ್ಲಿಆಹಾರ ಸಾಮಾಗ್ರಿಯ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ.ಕೆ.ಶೆಟ್ಟಿ ಪಾಲಿಕೆ ವಿರೋಧಪಕ್ಷದ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯರ ದೇವರಮನೆ ಶಿವಕುಮಾರ್ ವಾದ್ಯವೃಂದದ ಜಿಲ್ಲಾಧ್ಯಕ್ಷರಾದ ಚಿಂದೋಡಿ ಶಂಭುಲಿಂಗಪ್ಪ, ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಉಪಸ್ಥಿತರಿದ್ದರು.



