ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ನಿಂದ ಗುಣಮುಖರಾದ 7 ಜನರಲ್ಲಿ 3 ಜನರನ್ನುಇಂದು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಯಿತು.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿದ್ದ 3 ಕೋವಿಡ್ ಸೋಂಕಿತರನ್ನು ಬಿಡುಗಡೆ ಮಾಡಲಾಯಿತು. ಗುಣಮುಖರಾದ ಮೂವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಪಿ-585, ಪಿ-616 ಹಾಗೂ ಪಿ-635 ಆಸ್ಪತ್ರೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾದ ಕೋವಿಡ್ 19 ರೋಗಿಗಳಾಗಿದ್ದಾರೆ. ಈ ಹಿಂದೆ ನರ್ಸ್ ಸಂಪರ್ಕದಿಂದ ಅವರಿಗೆ ಸೋಂಕು ದೃಢಪಟ್ಟಿತ್ತು.
ಇಂದು ಡಿಸ್ಚಾರ್ಜ್ ಆದ ಎಲ್ಲರೂ ಬಾಷಾನಗರದ ನಿವಾಸಿಗಳಾಗಿದ್ದಾರೆ. ಮೇ. 1 ರಂದು ಕರೊನಾ ಪಾಸಿಟಿವ್ ದೃಢಪಟ್ಟ ನರ್ಸ್ನ 16 ವರ್ಷದ ಪುತ್ರ ಪಿ-585, ಮೇ. 4 ರಂದು ಪಾಸಿಟಿವ್ ದೃಢಪಟ್ಟ ಪಿ-616, 52 ವರ್ಷ, ಮಹಿಳೆ, ಪಿ-635, 11 ವರ್ಷದ ಬಾಲಕ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮೊದಲ ಹಂತವಾಗಿ 3 ಜನರನ್ನು ಬಿಡುಗಡೆ ಮಾಡಿದ್ದೇವೆ. ಸರ್ಕಾರ 7 ಜನರಿಗೆ ಬಿಡುಗಡೆಗೆ ಅನುಮತಿ ಕೊಟ್ಟಿದೆ. ಆದರೆ, 4 ಜನ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕಳುಹಿಸಲಾಗಿದೆ ಎಂದರು.
ಇದಲ್ಲದೆ ಇನ್ನು 12 ಜನ ಗುಣಮುಖರಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಅನುಮತಿ ಕೇಳಿದ್ದೇವೆ. ಸರ್ಕಾರ ಅನುಮತಿ ಕೊಟ್ಟ ನಂತರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಜನರು ಕೊರೊನಾ ಸೋಂಕಿನ ಬಗ್ಗೆ ಭಯಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಪಿ ಹನುಮಂತರಾಯ, ಡಿಎಚ್ ಒ ಡಾ. ರಾಘವೇಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್, ಡಾ. ಸುಭಾಷ್ ಚಂದ್ರ ಉಪಸ್ಥಿತರಿದ್ದರು.
https://www.facebook.com/permalink.php?story_fbid=242095457217337&id=105586904201527



