Connect with us

Dvgsuddi Kannada | online news portal | Kannada news online

ದಾವಣಗೆರೆಗೆ ಕೇರಳ, ತಬ್ಲಿಘಿಗಳ ಸೋಂಕು; ಇಂದು 21 ಪಾಸಿಟಿವ್ , ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ

ಪ್ರಮುಖ ಸುದ್ದಿ

ದಾವಣಗೆರೆಗೆ ಕೇರಳ, ತಬ್ಲಿಘಿಗಳ ಸೋಂಕು; ಇಂದು 21 ಪಾಸಿಟಿವ್ , ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಇಂದು 21 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿಯಲ್ಲಿ 19 ಪಾಸಿಟಿವ್ ಕೇಸ್  ಎಂದು ನಮೂದಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಒಟ್ಟು 21 ಕೇಸ್ ಗಳು ಪತ್ತೆಯಾಗಿವೆ.  ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿರ ಸಂಖ್ಯೆ 111 ಕ್ಕೆ ಏರಿಕೆಯಾಗಿದೆ.

ದಾವಣಗೆರೆ ಕಳೆದ 20 ದಿನದಿಂದ ಕೊರೊನಾ ವೈರಸ್ ಗೆ  ಅಕ್ಷರಶಃ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಇಂದು 21 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.  ಪಿ-976 ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ಕು ಜನರಿಗೆ ಸೋಂಕು, ಪಿ-556 ಮೃತ ವೃದ್ದನ ದ್ವಿತೀಯ ಸಂಪರ್ಕ ಸೋಂಕಿತನಿಂದ  08 ಜನರಿಗೆ, ಪಿ-533 ನರ್ಸ್ ನ ಸಂಪರ್ಕದಲ್ಲಿದ್ದ ಸೋಂಕಿತರಿಂದ 3 ಜನರಿಗೆ ಸೋಂಕು, 694 ಐಎಲ್ಐ ಸೊಂಕಿತರಿಂದ ಒಬ್ಬರಿಗೆ ಸೋಂಕು, ಅಹಮದಾಬಾದ್ ನಿಂದ ಬಂದ ಇಬ್ಬರು ಪುರುಷರಿಗೆ ಸೋಂಕು, ಕೇರಳದಿಂದ ಬಂದ ಮಹಿಳೆಗೆ ಸೋಂಕು ಹಾಗೂ ಹೊಸಪೇಟೆಯಿಂದ ಬಂದ ಇಬ್ಬರು ಯುವಕರಿಗೆ ಸೋಂಕು

  • ಪಿ-1247 35 ವರ್ಷದ ಮಹಿಳೆಯಾಗಿದ್ದು ಪಿ-694 ಸಂಪರ್ಕ
  • ಪಿ-1248   27 ವರ್ಷದ ಯುವಕ ಪಿ-662 ಸಂಪರ್ಕ
  • ಪಿ-1249   58 ವರ್ಷದ ಮಹಿಳೆ ಪಿ-662 ಜೊತೆ ಸಂಪರ್ಕ
  • ಪಿ-1250 22 ವರ್ಷದ ಮಹಿಳೆಯಾಗಿದ್ದು ಪಿ-662 ಜೊತೆ ಸಂಪರ್ಕ
  • ಪಿ-1251 48 ರ್ವಷದ ಪುರುಷನಾಗಿದ್ದು ಕಂಟೇನ್ ಮೆಂಟ್ ಝೋನ್ ಸಂಪರ್ಕ
  • ಪಿ-1252 14 ವರ್ಷದ ಯುವಕ ಪಿ-662 ಸಂಪರ್ಕ
  • ಪಿ-1253 5 ವರ್ಷದ ಮಗು ಪಿ-662 ಸಂಪರ್ಕ
  • ಪಿ-1254   30 ವರ್ಷದ ಯುವಕ ಪಿ-633 ಸಂಪರ್ಕ
  • ಪಿ-1255   31 ವರ್ಷದ ಯುವಕ ಪಿ-633 ಸಂಪರ್ಕ
  • ಪಿ-1292  23 ವರ್ಷದ ಮಹಿಳೆ ಪಿ-976 ಸಂಪರ್ಕ
  • ಪಿ-1293   36 ವರ್ಷದ ಮಹಿಳೆ ಪಿ-976 ಸಂಪರ್ಕ
  • ಪಿ-1309 40ವರ್ಷದ ಮಹಿಳೆ ಪಿ-663 ಸಂಪರ್ಕ
  • ಪಿ-1367 25 ವರ್ಷದ ಯುವಕ ಗುಜರಾತಿನ ಅಹಮದಾಬಾದ್ ಸಂಪರ್ಕ
  • ಪಿ-1368  30 ವರ್ಷದ ಮಹಿಳೆ ಕೇರಳ ರಾಜ್ಯದ ಸಂಪರ್ಕ
  • ಪಿ-1389 20 ಯುವಕ ಗುಜರಾತಿನ ಅಹಮದಾಬಾದ್ ಸಂಪರ್ಕ
  • ಪಿ-1370  11 ವರ್ಷದ ಯುವಕ ಪಿ976 ಸಂಪರ್ಕ
  • ಪಿ-1371 13 ವರ್ಷದ ಯುವತಿ ಪಿ-976 ಸಂಪರ್ಕ
  • ಪಿ1372   35 ವರ್ಷದ ಮಹಿಳೆ ಪಿ-662 ಸಂಪರ್ಕ
  • ಪಿ-1373   70 ವರ್ಷದ ವೃದ್ಧ ಪಿ556 ಸಂಪರ್ಕ
  • ಹೊಸಪೇಟೆಯಿಂದ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್

 ಜಿಲ್ಲೆಯಲ್ಲಿ ಒಟ್ಟು111 ಸೋಂಕಿತರಿದ್ದಾರೆ. ಇದರಲ್ಲಿ 4 ಜನ ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 105 ಸಕ್ರಿಯ ಪ್ರಕರಣಗಳಿವೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top