ಡಿವಿಜಿ ಸುದ್ದಿ, ಬೆಂಗಳೂರು: ಲಾಕ್ ಡೌನ್ ಪರಿಣಾಮ ವಿದೇಶಗಳಲ್ಲಿ ಸಿಲುಕಿ ಸಂಕಷ್ಟದಲ್ಲಿರುವ 240 ಕನ್ನಡಿಗರನ್ನು ಹೊತ್ತ ಏರ್ ಇಂಡಿಯಾ ವಿಮಾನ ಲಂಡನ್‌ನಿಂದ ನಾಳೆ ಬೆಳಗ್ಗೆ 3 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.
ತುರ್ತಾಗಿ ತಾಯ್ನಾಡಿಗೆ ಬರುವವರನ್ನು ಮೊದಲ ಆದ್ಯತೆ ತಾಯ್ನಾಡಿಗೆ ಬರುತಗತಿದ್ದಾರೆ. ಲಂಡನ್‌ನಲ್ಲಿ 58 ದಿನಗಳ ಹಿಂದೆ ಮೃತಪಟ್ಟ ಸಾಫ್ಟ್‌ವೇರ್ ಎಂಜಿನಿಯರ್ ಹುಬ್ಬಳ್ಳಿಯ ಶಿವರಾಜ ಗದೆಗೆಪ್ಪಗೌಡ ಪಾಟೀಲ ಅವರ ಪಾರ್ಥಿವ ಶರೀರವನ್ನೂ ಇದೇ ವಿಮಾನದಲ್ಲಿ ತರಲಾಗುತ್ತಿದೆ. ಪಾಟೀಲ ಅವರ ಪತ್ನಿ ಶಿವಲೀಲಾ ಪಾಟೀಲ ಮತ್ತು ಪುತ್ರ ಶಿವಾಂಗ ಪಾಟೀಲ ಕೂಡ ವಿಮಾನದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಎಂಎಲ್ ಸಿ ಜಯಮಾಲಾ ಅವರ ಮಗಳು ಸೌಂದರ್ಯಾ ಕೂಡಾ ಇದೇ ವಿಮಾನದಲ್ಲಿ ತಾಯ್ನಾಡಿಗೆ ಮರಳುತ್ತಿದ್ದಾರೆ.
ಇನ್ನೊಂದು ವಿಮಾನ ಮೇ 12ರಂದು ಮಂಗಳೂರಿನ ಬೆಂಗಳೂರಿಗೆ ಬರಲಿದೆ. ದುಬೈಯಿಂದ 200 ಕನ್ನಡಿಗರನ್ನು ಹೊತ್ತ ವಿಮಾನ ಅಲ್ಲಿಗೆ ಬರಲಿದೆ. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಯೋಜನೆಯಡಿ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆದುಕೊಂಡು ಬರಲಾಗುತ್ತಿದೆ. ಕನ್ನಡಿಗರ ಮೊದಲ ತಂಡವನ್ನು ಸ್ವಾಗತಿಸಲು ಮತ್ತು ಪ್ರಯಾಣಿಕರ ಸಂಪೂರ್ಣ ಪರೀಕ್ಷೆ, ಸ್ಕ್ರೀನಿಂಗ್ ವ್ಯವಸ್ಥೆಗಳ ಪರಿಶೀಲನೆ ನಡೆಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿಮಾನ ನಿಲ್ದಾಣಕ್ಕೆ ಹೋಗಲಿದ್ದಾರೆ.



