Connect with us

Dvgsuddi Kannada | online news portal | Kannada news online

ಮೂರು ತಿಂಗಳ ಸರಾಸರಿ ವಿದ್ಯುತ್ ಬಿಲ್

ಪ್ರಮುಖ ಸುದ್ದಿ

ಮೂರು ತಿಂಗಳ ಸರಾಸರಿ ವಿದ್ಯುತ್ ಬಿಲ್

ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್‍ ರೀಡಿಂಗ್ ಸಾಧ್ಯವಾಗಿರುವುದಿಲ್ಲ. ಹೀಗಾಗಿ ಸರ್ಕಾರದ ಆದೇಶದ ಅನ್ವಯ ಕಳೆದ ಹಿಂದಿನ ಮೂರು ತಿಂಗಳಿನ ಬಿಲ್‍ನ್ನು ಆಧರಿಸಿ ಸರಾಸರಿ ಬಿಲ್ ನೀಡಲಾಗುತ್ತಿದೆ  ಎಂದು ದಾವಣಗೆರೆ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ. ಪಟೇಲ್ ತಿಳಿಸಿದ್ದಾರೆ.

ಮೇ ತಿಂಗಳ ರೀಡಿಂಗ್ ಸಾಧ್ಯವಾಗದ ಕಾರಣ  ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಬಿಲ್  ಒಟ್ಟಿಗೆ ಮಾಡಲಾಗಿರುತ್ತದೆ. ಈ ಹಿಂದೆ ಏಪ್ರಿಲ್ ತಿಂಗಳ ಮಾಹೆಯಲ್ಲಿ ಮಾಡಲಾಗಿರುವ ಸರಾಸರಿ ಬಿಲ್ಲನ್ನು ತೆಗೆದು ಹಾಕಲಾಗಿರುತ್ತದೆ. ಏಪ್ರಿಲ್ ತಿಂಗಳಲ್ಲಿ ಮೊತ್ತವನ್ನು ಪಾವತಿಸಿದ್ದಲ್ಲಿ, ಪಾವತಿಸಲಾದ ಮೊತ್ತವನ್ನು ಮೇ ತಿಂಗಳ ಬಿಲ್ಲಿನಲ್ಲಿ ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗಿರುತ್ತದೆ. ಗ್ರಾಹಕರಿಗೆ ಅಧಿಕ ಹೊರೆ ಆಗದಂತೆ ಎರಡೂ ತಿಂಗಳಿಗೆ ಸಮನಾಗಿ ಯೂನಿಟ್ ಬಳಕೆ ವಿಂಗಡಿಸಿ ಸ್ಲ್ಯಾಬ್‍ನ್ನು ಸಮಾನವಾಗಿ ಹಂಚಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಅವೈಜ್ಷಾನಿಕವಾಗಿ ಬಿಲ್ ನೀಡಿದ್ದರಿಂದ ಗ್ರಾಹಕರು ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಬೆಸ್ಕಾಂ ಮೂರು ತಿಂಗಳ ಸರಾಸರಿ ಬಿಲ್ ನೀಡುವುದಾಗಿ ತಿಳಿಸಿದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top