ಡಿವಿಜಿ ಸುದ್ದಿ, ಬೆಂಗಳೂರು: ಕರ್ನಾಟಕದಲ್ಲಿ 900 ಹೊಸ ಎಂಎಸ್‍ಐಎಲ್ ಮಳಿಗೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.
ಶೀಘ್ರವೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4 ಮಳಿಗೆ ಆರಂಭಿಸಲು ಚಿಂತನೆ ನಡೆಸಿದೆ. ಆದಾಯ ಹೆಚ್ಚಿಸಲು ಎಂಎಸ್‍ಐಎಲ್ ಮಳಿಗೆ ತೆರೆಯಲು ಸರ್ಕಾರ ನಿರ್ಧರಿಸಿದೆ.
2016ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಸನ್ನದು ಸ್ಥಳ ಆರಿಸುವಾಗ ಸ್ಥಳೀಯರ ಶಾಸಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಸೂಚನೆ ಕೈಬಿಡುವಂತೆ ಆರ್ಥಿಕ ಇಲಾಖೆ ಮಾರ್ಚ್ 30 ರಂದು ಹೊರಡಿಸಿದ ಆದೇಶದಲ್ಲಿ ಅಬಕಾರಿ ಆಯುಕ್ತರಿಗೆ ತಿಳಿಸಿದೆ.



