ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 28ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಒಂದರಲ್ಲಿಯೇ 21 ಪ್ರಕರಣ ಗಳು ಪ್ತೆಯಾಗಿದ್ದು, ಇನ್ನುಳಿದಂತೆ ಮಂಡ್ಯ 2, ಕಲಬುರಗಿಯಲ್ಲಿ 2, ಹಾವೇರಿ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ ಭಾಷಾನಗರದ ನರ್ಸ್ ಒಬ್ಬರಿಂದಲೇ 18 ಜನ ಮತ್ತು ನರ್ಸ್ ಪುತ್ರ ಸೇರಿ 19 ಜನರಿಗೆ ಸೋಂಕು ತಗಲಿದೆ. ಮಂಡ್ಯ ಜಿಲ್ಲೆಯ ಮುಂಬೈ ಕಂಟಕ ಎದುರಾಗಿದ್ದು, ಆಟೋ ಚಾಲಕನ ಸಂಪರ್ಕದಲ್ಲಿದ್ದ ಇಬ್ಬರು ಯುವತಿಯರಿಗೆ ಸೋಂಕು ತಗುಲಿದೆ.
ಇನ್ನು ಲಾಕ್‍ಡೌನ್ ಸಡಿಲಿಕೆಯ ಮೊದಲ ದಿನವೇ ಇಷ್ಟು ಗ್ರೀನ್ ಝೋನ್ ನಲ್ಲಿದ್ದ ಹಾವೇರಿಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿಯ ಸೋಂಕಿತ ಇಬ್ಬರು ಸ್ನೇಹಿತರ ಜೊತೆ ಮುಂಬೈನಿಂದ ಲಾರಿಯಲ್ಲಿ ಬಂದಿದ್ದನು. ಜಿಲ್ಲಾಡಳಿತ ಇನ್ನಿಬ್ಬರ ವರದಿಗಾಗಿ ಕಾಯುತ್ತಿದೆ.
ಕಲಬುರಗಿ ಜಿಲ್ಲೆಯ 56 ವರ್ಷದ ವ್ಯಕ್ತಿ ಇಂದು ನಿಧನ ಹೊಂದಿದ್ದರು. ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಏ. 29 ರಂದು ಕಲಬುರಗಿಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇಂದು ಆಸ್ಪತ್ರೆಯಲ್ಲಿ ಕೊರೊನಾದಿದ ಗುಣಮುಖರಾಗಿ 11 ಕೇಸ್ ಡಿಸ್ಚಾರ್ಜ್ ಆಗಿದ್ದಾರೆ.



