ಡಿವಿಜಿ ಸುದ್ದಿ, ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಇವತ್ತು ಕರಾಳ ದಿನ. ಮಹಾಮಾರಿ ಕೊರೊನಾ ವೈರಸ್ ಒಂದೇ ದಿನ 21 ಮಂದಿಗೆ ಪತ್ತೆಯಾಗಿದೆ. ಗ್ರೀನ್ ಝೋನ್ ಗೆ ಬಂದಿದ್ದ ದಾವಣಗೆರೆ ಮತ್ತೆ ರೆಡ್ ಜೋನ್ ನತ್ತ ಮುಖ ಮಾಡಿದೆ.
ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ ಭಾಷಾನಗರ ನರ್ಸ್ ಮತ್ತು ಜಾಲಿನಗರದ ಒರ್ವ ವೃದ್ಧನಿಂದ ಕೊರೊನಾ ಪಾಸಿಟಿವ್ ಪತ್ತೆ ಆಗುವ ಮೂಲಕ ಆತಂಕ ಮೂಡಿಸಿತ್ತು. ಇದಾನ ನಂತರ 6 ಕೇಸ್ ಪತ್ತೆಯಾಗಿ ಆತಂಕ ಇನ್ನಷ್ಟು ಹೆಚ್ಚಾಗಿತ್ತು. ಇದೀಗ ಈ ಎರಡು ನಗರದ ನಂಜು ಇಡೀ ದಾವಣಗೆರೆಯಲ್ಲಿ ಹರಡುವ ಭೀತಿ ಎದುರಾಗಿದೆ. ಇಂದು ಒಂದೇ ದಿನ 21 ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ಒಂದೇ ದಿನ 21 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಜಿಲ್ಲಾಡಳಿತ ಕಳುಹಿಸಿದ 94 ಸ್ಯಾಂಪಲ್ ಗಳ ಪೈಕಿ 21 ಮಂದಿಗೆ ಸೋಂಕು ತಗುಲರೋದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸಂಖ್ಯೆ 31ಕ್ಕೆ ಏರಿಕೆಯಗಿದೆ. ಯಾರಿಂದ ಈ 21 ಮಂದಿಗೆ ಸೋಂಕು ತಗುಲಿದೆ ಎಂಬ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.