ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ಬಡವರಿಗೆ ಹಂಚಲು ರೈತರಿಂದ ನೇರವಾಗಿ 6 ಸಾವಿರ ಕೆಜಿ ತರಕಾರಿಗಳನ್ನು ಕೆಪಿಸಿಸಿ ವಕ್ತಾರ ಕೊಂಡಜ್ಜಿ ಖರೀದಿ ಮಾಡಿದ್ದಾರೆ.
ಲಾಕ್ ಡೌನ್ ನಿಂದ ತರಕಾರಿಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ರೈತರಿಂದ ನೇರವಾಗಿ ಖರೀದಿಸಿ ಬಡವರಿಗೆ ಹಂಚಲಿದ್ದಾರೆ. ಲಾಕ್ ಡೌನ್ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಬಹಳಷ್ಟು ತೊಂದರೆ ರೈತರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಕೆಪಿಸಿಸಿ ವಕ್ತಾರ ನಿಖಿಲ್ ಕೊಂಡಜ್ಜಿ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಸುತ್ತಮುತ್ತಲಿನ ಬುಳ್ಳಾಪುರ, ಕೆಂಚನಹಳ್ಳಿ ಗ್ರಾಮದಲ್ಲಿ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ರೈತರ ಜಮೀನುಗಳಿಗೆ ಹೋಗಿ ಖರೀದಿಸಿದ್ದಾರೆ.

ಈರುಳ್ಳಿ – 1500 ಕೆ ಜಿ , ಬದನೆಕಾಯಿ- 1500 ಕೆ ಜಿ , ಟೊಮೆಟೊ – 1500 ಕೆ ಜಿ , ಎಲೆ ಕೋಸು – 1500 ಕೆ ಜಿ ಸೇರಿದಂತೆ ಒಟ್ಟು 6000 ಕೆಜಿ ತರಕಾರಿಯನ್ನು ಖರೀದಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸ್ಥಳೀಯವಾಗಿಯೇ ರೈತರಿಂದ ಅವರು ಬೆಳೆದ ತರಕಾರಿಗಳನ್ನು ಖರೀದಿ ಮಾಡಿ ಜನರಿಗೆ ಹಂಚಬೇಕು ಎನ್ನುವ ಸಂದೇಶವನ್ನು ಇವರು ಪಾಲಿಸಿದ್ದಾರೆ.




