Connect with us

Dvgsuddi Kannada | online news portal | Kannada news online

ದಾವಣಗೆರೆ: ಎಲ್ಲೆಂದರಲ್ಲಿ ಉಗುಳುವುದು, ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ದಂಡ

ಪ್ರಮುಖ ಸುದ್ದಿ

ದಾವಣಗೆರೆ: ಎಲ್ಲೆಂದರಲ್ಲಿ ಉಗುಳುವುದು, ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ದಂಡ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇದುವರೆಗೆ 10 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಉಗುಳುವುದು ಹಾಗೂ ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂಪಾಯಿ ದಂಡ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ.

ಡಬ್ಲ್ಯುಹೆಚ್‍ಓ ನಿರ್ದೇಶನ ಹಾಗೂ ಎಪಿಡೆಮಿಕ್ ಡಿಸೀಸ್ ಕಾಯ್ದೆ 1897, ಕರ್ನಾಟಕ ಡಿಸೀಸ್(ಕೋವಿಡ್-19) ರೆಗ್ಯುಲೇಷನ್ಸ್ 2020 ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮತ್ತು ಸಮರ್ಪ ಸ್ವಚ್ಚತೆ ಕುರಿತಂತೆ ಈ ಕೆಳಕಂಡಂತೆ ಕ್ರಮಗಳನ್ನು ಜರುಗಿಸುವುದು ಅವಶ್ಯಕವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ 5 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಬೇಕು. ಮನೆಗಳಲ್ಲಿ ಬಳಸಿದ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬಳಸಲಾದ ಮಾಸ್ಕ್ ಮತ್ತು ಗ್ಲೋವ್ಸ್ ಗಳನ್ನು ಸಮರ್ಪಕವಾಗಿ ಕವರ್‍ಗಳಲ್ಲಿ ಅಥವಾ ಬ್ಯಾಗ್‍ಗಳಲ್ಲಿ ಕವರ್ ಮಾಡಿ ತ್ಯಾಜ್ಯ ಸಂಗ್ರಹಿಸುವವರಿಗೆ ನೀಡಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಕಸ ಹಾಕುವಂತಹ ಸಾರ್ವಜನಿಕ ಉಪದ್ರವಗಳನ್ನು ನಿಷೇಧಿಸಲಾಗಿದ್ದು, ಹೀಗೆ ಮಾಡಿದಲ್ಲಿ ಸಾರ್ವಜನಿಕ ಅಪರಾಧವೆಂದು ಪರಿಗಣಿಸಿ ಒಂದು ಬಾರಿ ಉಲ್ಲಂಘಿಸಿದಲ್ಲಿ ರೂ.500 ಮತ್ತು ಎರಡನೇ ಮತ್ತು ಮುಂದುವರೆದ ಉಲ್ಲಂಘನೆಗಳಿಗೆ ರೂ.1000 ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top