ಡಿವಿಜಿಸುದ್ದಿ.ಕಾಂ, ದಾವಣಗೆರೆ: ದಾವಣಗೆರೆ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, 15 ಕ್ಕೂ ಹೆಚ್ಚು ಬ್ರೋಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರಿಂದ ಡಿಎಲ್, ಎಲ್‌ಎಲ್‌ಆರ್ ಮಾಡಿಸಲು ದುಪ್ಪಟ್ಟು ದರ ವಸೂಲು ಮಾಡುತ್ತಿದ್ದ ಬ್ರೋಕರ್‌ಗಳನ್ನು ವಶಕ್ಕೆ ಪಡೆದು ಅವರಿಂದ ಅಪಾರ ಪ್ರಮಾಣದ ನಗದು ಹಣ ವಶಕ್ಕೆ ಪಡೆಯಲಾಗಿದೆ.
ಹೊಸ ಮೋಟಾರ್ ವಾಹನ ಕಾಯ್ದೆ ಲಾಭ ಪಡೆಯುತ್ತಿದ್ದ ಬ್ರೋಕರ್‌ಗಳು ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು. ಈ ಮೂಲಕ ಕಳೆದ 15 ದಿನದಲ್ಲಿ ಸಾರ್ವಜನಿಕರಿಂದ ದುಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರಿನ ಅನ್ವಯ ಅಧಿಕಾರಿ ಇವತ್ತು ದಾಳಿ ನಡೆಸಿದ್ದಾರೆ. ಈ ದಾಳಿ ಮೂಲಕ ಆರ್‌ಟಿಒ ಆಫೀಸ್ ನಲ್ಲಿ ನಡೆಯುತ್ತಿರುವ ಏಜೆಂಟರ್ ಗಳ ಹಾವಳಿಗೆ ಬ್ರೇಕ್ ಬೀಳುತ್ತಾ ಎಂಬುದು ಸದ್ಯದ ಪ್ರಶ್ನೆ.