ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು 11 ಮಂದಿಗೆ ಹೊಸದಾಗಿ ಕೊರೊನಾ ಪ್ರಕರಣಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.
ಮಂಡ್ಯದಲ್ಲಿ ಒಂದೇ ದಿನ 8 ಜನರಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಕೊರೊನಾ ತಗುಲಿದೆ. ಇತ್ತ ಬೆಳಗಾವಿಯಲ್ಲೂ ಓರ್ವ ಸೋಂಕಿತನಿಂದ ಮೂವರಿಗೆ ಕೊರೊನಾ ತಗುಲಿದ್ದು, ಬೆಳಗಾವಿಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ರಾಜ್ಯದಲ್ಲಿ ಇದುವರೆಗೆ ಕೊರೊನಾ ವೈರಸ್ 22 ಜನರು ಬಲಿಯಾಗಿದ್ದು, 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.



