ಡಿವಿಜಿ ಸುದ್ದಿ, ದಾವಣಗೆರೆ: ಸರ್ಕಾರಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಗೆ ನೀಡಲಾಗಿದೆ. ಆದರೆ, ಪೊಲೀಸ್ ಇಲಾಖೆ ಸಿಬ್ಬಂದಿ ಪಾಸ್ ಕೇಳುತ್ತಿದ್ದು, ಜಿಲ್ಲಾಡಳಿತ ಗುತ್ತಿಗೆದಾರರು ಮತ್ತು ಕೆಲಸ ಮಾಡುವ ಕೆಲಸಗಾರಿಗೆ ಪಾಸ್ ನೀಡುವ ವ್ಯವಸ್ಥೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಡಿ. ಬಸವರಾಜ್ ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ಮಾನ್ಯ ಜಿಲ್ಲಾಧಿಕಾರಿಗಳ ಬಳಿ ಪಾಸ್ ಗೆ ಮನವಿ ಮಾಡಿದಾಗ, ನಿಮಗೆ ಪಾಸ್ ಅವಶ್ಯಕತೆ ಇಲ್ಲ. ನಿಮ್ಮ ಗುತ್ತಿಗೆ ಲೈಸೆನ್ಸ್ ತೋರಿಸಿ ಓಡಾಡಬಹುದು ಎಂದು ತಿಳಿಸಿದ್ದರು. ಆದರೆ, ಪೊಲೀಸ್ ಸಿಬ್ಬಂದಿ ಗುತ್ತಿಗೆದಾರರ ಲೈಸೆನ್ಸ್ ಗೆ ಮಾನ್ಯತೆ ನೀಡದೆ, ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ರಸ್ತೆ ಕೆಲಸ ಹಾಗೂ ಗರೆ ಕೆಲಸಗಾರರಿಗೆ ಪಾಸ್ ನೀಡಬೇಕು ಎಂದು ಡಿ. ಬಸವರಾಜ್ ಮನವಿ ಮಾಡಿದ್ದಾರೆ.



